ಚಿಕ್ಕಮಗಳೂರು ನಗರಸಭೆ ಅದ್ಯಕ್ಷರ ವಿರುದ್ಧ BJP ಮಂಡಿಸಿದ್ದ ಅವಿಶ್ವಾಸ ಮಂಡನೆಗೆ ಸೋಲು

Update: 2023-11-10 08:52 GMT

ಚಿಕ್ಕಮಗಳೂರು: ನಗರಸಭೆ ಅದ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆಗೆ ಸೋಲಾಗಿದ್ದು, ನಗರಸಭೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅವಿಶ್ವಾಸ ಮಂಡನೆ ವಿಶೇಷ ಸಭೆಯಲ್ಲಿ ಸಂಖ್ಯಾಬಲ ಪ್ರದರ್ಶಸಿಸಲು ವಿಫಲವಾದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ಸದಸ್ಯರು ಶುಕ್ರವಾರ ಕರೆದಿದ್ದ ಅವಿಶ್ವಾಸ ಮಂಡನೆಗೆ ಸೋಲಾಯಿತು.

ಈ ಹಿನ್ನಲೆಯಲ್ಲಿ ನಗರಸಭೆ ಹಾಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ 2024 ಜುಲೈ ವರೆಗೆ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

ಸಭೆಯ ಆರಂಭದಲ್ಲಿ ಅವಿಶ್ವಾಸ ಮಂಡನೆ ಪರ ಇರುವವರು ಕೈ ಎತ್ತುವಂತೆ ಸೂಚಿಸಿದಾಗ ಬಿಜೆಪಿ ಸದಸ್ಯರು ಸಭೆಯಲ್ಲಿ ಮಾತನಾಡುವಂತೆ ಸಭೆಗೆ ಮಂಡನೆ ಮಾಡಿದರು. ಈ ವೇಳೆ ಇದು ಅವಿಶ್ವಾಸ ಸಭೆಯಾಗಿರುವುದರಿಂದ ಮೊದಲು ಅವಿಶ್ವಾಸ ಸಂಬಂಧ ಕೈ ಎತ್ತಿ ಎತ್ತುವಂತೆ ಅಧ್ಯಕ್ಷರು ಎರಡು ಬಾರೀ ಅವಕಾಶ ನೀಡಿದರು. ಈ ವೇಳೆ ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಮಾತಿನ ಚಕಾಮಕಿ ನಡೆಯಿತು. ಗೊಂದಲ ಮುಂದುವರಿಯುತ್ತಿದ್ದಂತೆ ನೀಡಿದ ಗಡುವಿನಲ್ಲಿ ಯಾರೂ ಕೈ ಎತ್ತಲು ಮುಂದಾಗದಿದ್ದಾಗ ಅವಿಶ್ವಾಸ ನಿರ್ಣಯ ಮಂಡನೆ ಸಾಧ್ಯವಾಗಿಲ್ಲವೆಂದು ಸಭೆಯನ್ನು ಬರಖಾಸ್ತುಗೊಳಿಸಲಾಯಿತು.

ಸಭೆಯ ಬಳಿಕ ಬಿಜೆಪಿ ಸದಸ್ಯರು ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ನಂತರ ಅಧ್ಯಕ್ಷ ರ ಕೊಠಡಿ ಎದುರು ಪ್ರತಿಭಟನೆ ನಡೆಸಿದರು.

ಪಕ್ಷದ ಆಂತರಿಕ ಒಪ್ಪಂದದ ಪ್ರಕಾರ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಎರಡು ಬಾರಿ ರಾಜೀನಾಮೆ ನೀಡಿದ್ದರು. ಆದರೆ, ಏಕಾಏಕಿ ವಾಪಸ್ ಪಡೆದು ಪಕ್ಷವನ್ನು  ಮುಜುಗರಕ್ಕೀಡು ಮಾಡಿದ್ದರು. ಇದರಿಂದ ಬಿಜೆಪಿ, ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಅಲ್ಲದೇ ಬಿಜೆಪಿಯ 17 ಸದಸ್ಯರು, ಜೆಡಿಎಸ್, ಎಸ್ ಡಿಪಿಐ ಮತ್ತು ಪಕ್ಷೇತರರು ಸೇರಿ 21 ಸದಸ್ಯರು ಸಹಿ ಹಾಕಿ ಅವಿಶ್ವಾಸ ಮಂಡನೆಗೆ ಅವಕಾಶ ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News