ಒಂದೇ ಹುದ್ದೆಗೆ ಐವರಿಗೆ ವರ್ಗಾವಣೆ ಆದೇಶ | ವಿಪಕ್ಷಗಳ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಸಿಎಂ ಕಚೇರಿ ಸ್ಪಷ್ಟನೆ

Update: 2023-07-01 17:11 GMT

ಬೆಂಗಳೂರು, ಜು. 1: ಒಂದೇ ಹುದ್ದೆಗೆ ಸರಕಾರದಿಂದ ಐವರಿಗೆ ವರ್ಗಾವಣೆ ಆದೇಶವೆಂಬುದು ಸುಳ್ಳು. ಅಧಿಕಾರಿಗಳು, ಸಿಬ್ಬಂದಿಗಳ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಅವಧಿಯು ಜೂ.30ಕ್ಕೆ ಕೊನೆಗೊಂಡಿದ್ದು, ವರ್ಗಾವಣೆ ಪ್ರಕ್ರಿಯೆ ಕುರಿತು ವಿಪಕ್ಷ ನಾಯಕರುಗಳು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸಿಎಂ ಕಚೇರಿ ಸ್ಪಷ್ಟನೆ ನೀಡಿದೆ.

‘ಸರಕಾರ ಬದಲಾದಂತೆ ವಿವಿಧ ಇಲಾಖೆಗಳಲ್ಲಿನ ಅಧಿಕಾರಿಗಳು, ಸಿಬ್ಬಂದಿಯ ಬದಲಾವಣೆ ಪ್ರಕ್ರಿಯೆ ಸಹಜ. ಸಾಮಾನ್ಯ ವರ್ಗಾವಣೆ ಅವಧಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಯ ವರ್ಗಾವಣೆ ಕುರಿತು ಸಿಎಂ ಕಚೇರಿಗೆ ವಿವಿಧ ಇಲಾಖೆಗಳಿಗೆ ಸ್ಥಳ ನಿಯುಕ್ತಿ ಕೋರಿ ದಿನನಿತ್ಯ ನೂರಾರು ಪತ್ರಗಳು ಬರಲಿವೆ. ಅದರಂತೆ ಸಿಎಂ, ಮನವಿ ಮೇರೆಗೆ ಹುದ್ದೆಗೆ ಹೆಸರು ಶಿಫಾರಸ್ಸುಗಳನ್ನು ಮಾಡಿರುತ್ತಾರೆಯೇ ಹೊರತು ಸರಕಾರಿ ಆದೇಶವನ್ನು ಹೊರಡಿಸಿರುವುದಿಲ್ಲ’ ಎಂದು ಸ್ಪಷ್ಟಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News