"ಇದು ಇಂಗ್ಲೆಂಡ್ ಅಲ್ಲ": ಶೇ. 60ರಷ್ಟು ಕನ್ನಡ ಬಳಕೆ ನಿಯಮವನ್ನು ಸಮರ್ಥಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2023-12-28 06:18 GMT

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (PTI)

ಹೊಸದಿಲ್ಲಿ: ನಾನು ಹಿಂಸಾಚಾರವನ್ನು ಸಮರ್ಥಿಸದಿದ್ದರೂ, ಕರ್ನಾಟಕದಲ್ಲಿನ ನಾಮಫಲಕಗಳಲ್ಲಿ ಸ್ಥಳೀಯ ಭಾಷೆಯನ್ನು ಪ್ರಧಾನವಾಗಿ ಪ್ರದರ್ಶಿಸಬೇಕು ಎಂಬ ಆಗ್ರಹವನ್ನು ಒಪ್ಪುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಪರ ಹೋರಾಟಗಾರರು ಕನ್ನಡ ನಾಮಫಲಕಕ್ಕಾಗಿ ಆಗ್ರಹಿಸಿ ಬೃಹತ್ ಹೋರಾಟ ನಡೆಸಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ಮಳಿಗೆಗಳ ಮಾಲಕರೇಕೆ ಕೇವಲ ಇಂಗ್ಲಿಷ್ ನಲ್ಲಿ ನಾಮಫಲಕ ಬರೆಸಲು ಆಧ್ಯತೆ ನೀಡುತ್ತಾರೆ ಎಂದು ಪ್ರಶ್ನಿಸಿದರು ಎಂದು ndtv.com ವರದಿ ಮಾಡಿದೆ.

“ಎಲ್ಲರೂ ನಾಮಫಲಕಗಳನ್ನು ಓದಲು ಸಾಧ್ಯವಾಗಬೇಕು ಹಾಗೂ ಎಲ್ಲರಿಗೂ ಇಂಗ್ಲಿಷ್ ಅನ್ನು ಓದಲು ಸಾಧ್ಯವಿಲ್ಲ. ಕನ್ನಡ ಮತ್ತು ಇಂಗ್ಲಿಷ್ ಅಥವಾ ಮತ್ತೊಂದು ಭಾಷೆಯಾದ ಹಿಂದಿಯಲ್ಲಿ ಬರೆಯಲು ಏನು ತೊಂದರೆಯಿದೆ? ಇದು ಇಂಗ್ಲೆಂಡ್ ಅಲ್ಲ” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News