ಇನ್ನು ಮುಂದೆ ಜಿಲ್ಲಾ ಮಟ್ಟದಲ್ಲಿ ವಕ್ಫ್ ಅದಾಲತ್: ಸಚಿವ ಝಮೀರ್ ಅಹ್ಮದ್ ಖಾನ್

Update: 2023-09-13 13:08 GMT

ಬೆಂಗಳೂರು :ರಾಜ್ಯದಲ್ಲಿ ಜಿಲ್ಲಾ ಮಟ್ಟದಲ್ಲಿ ವಖ್ಫ್ ಅದಾಲತ್ ನಡೆಸಲಾಗುವುದು ಎಂದು ವಕ್ಫ್ ಸಚಿವ ಝಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.

ಬುಧವಾರ ವಖ್ಫ್ ಬೋರ್ಡ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ವಕ್ಫ್ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸಿ ಅಲ್ಲಿನ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ಪ್ರತಿ ಜಿಲ್ಲೆಯಲ್ಲಿರುವ ವಕ್ಫ್ ಆಸ್ತಿಗಳು, ಒತ್ತುವರಿ ಪ್ರಮಾಣ, ನ್ಯಾಯಾಲಯದಲ್ಲಿರುವ ಪ್ರಕರಣ ಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯಲಾಗುವುದು ಎಂದು ಹೇಳಿದರು.

ವಕ್ಫ್ ವ್ಯಾಪ್ತಿಯ ಆಸ್ತಿ ಒತ್ತುವರಿ ತೆರವು ಹಾಗೂ ನ್ಯಾಯಾಲಯ ದಲ್ಲಿರುವ ಪ್ರಕರಣ ಗಳ ತ್ವರಿತ ಇತ್ಯರ್ಥ ಹಾಗೂ ಇರುವ ಆ ಸ್ತಿಗಳ ಸಂರಕ್ಷಣೆ ಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು.

ವಕ್ಫ್ ವ್ಯಾಪ್ತಿಯಲ್ಲಿ ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಎಷ್ಟೆಷ್ಟು ಆಸ್ತಿ ಬಾಡಿಗೆ, ಲೀಸ್ ಆಧಾರದಲ್ಲಿ ನೀಡಲಾಗಿದೆ, ಲೀಸ್ ಅವಧಿ ಮುಗಿದಿರುವ ಪ್ರಕರಣ ಎಷ್ಟು, ಎಷ್ಟು ಬಾಡಿಗೆ ಪ್ರಸ್ತುತ ಬರುತ್ತಿದೆ ಎಂಬ ಸಂಪೂರ್ಣ ವಿವರ ಸಿದ್ದಪಡಿಸಿ ಎಂದು ಸೂಚನೆ ನೀಡಿದರು.

ವಕ್ಫ್ ಆಸ್ತಿ ವಾಣಿಜ್ಯ ಚಟುವಟಿಕೆಗಳಿಗೆ ಜಂಟಿ ಸಹಭಾಗಿತ್ವದಡಿ ನೀಡುವ ಬದಲು ವಕ್ಫ್ ವತಿಯಿಂದಲೇ ನಿರ್ಮಾಣ ಮಾಡುವ ಬಗ್ಗೆಯೂ ಚಿಂತನೆ ನಡೆಸಿ, ಪ್ರತಿ ತಾಲೂಕಿನಲ್ಲಿ ಒಂದು ಆಸ್ಪತ್ರೆ ಮತ್ತು ಒಂದು ಶಾಲೆ ನಿರ್ಮಾಣ ಕ್ಕೆ ಯೋಜನೆ ರೂಪಿಸಬೇಕಿದೆ. ಹೀಗಾಗಿ ಸೂಕ್ತ ಜಾಗ ಗುರುತಿಸಿ ಎಂದು ಹೇಳಿದರು.

ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ಕಾರ್ಯನಿವಾಹಕ ಅಧಿಕಾರಿ ಖಾನ್ ಫರ್ವೇಜ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಉಪಸ್ಥಿತರಿದ್ದರು.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈ ಹಿಂದೆ ಪ್ರಮುಖ ಭಾಗದಲ್ಲಿ ಒತ್ತುವರಿ ತೆರವು ಮಾಡಿ 65 ಖಾತೆ ಮಾಡಿಕೊಡಲಾಗಿತ್ತು. ಆ ಆಸ್ತಿ ಗಳ ಒಟ್ಟಾರೆ ವಿಸ್ತೀರ್ಣ, ಪ್ರಸ್ತುತ ಸ್ಥಿತಿಗತಿ ಕುರಿತು ವರದಿ ಸಲ್ಲಿಸಿ ಎಂದು ಸಭೆಯಲ್ಲಿ ಸಚಿವರು ನಿರ್ದೇಶನ ನೀಡಿದರು

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News