ಮುಸ್ಲಿಮರ ಮೀಸಲಾತಿ ರದ್ದು ಪಡಿಸುವುದಾಗಿ ಅಮಿತ್‌ ಶಾ ಹೇಳಿದ್ದ ಹಳೆಯ ವಿಡಿಯೋ ಹಂಚಿಕೊಂಡ ಯತ್ನಾಳ್

Update: 2024-04-22 10:32 GMT

ಅಮಿತ್‌ ಶಾ (PTI)

ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಮರ 4% ಮೀಸಲಾತಿ ರದ್ದುಪಡಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹಳೆಯ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಆದರೆ, ಈ ವಿಡಿಯೋ ತುಣುಕು ಕಳೆದ ವರ್ಷ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಚುನಾವಣೆಗೂ ಮುನ್ನ ಗೃಹ ಸಚಿವರು ಮಾಡಿದ ಭಾಷಣಕ್ಕೆ ಸಂಬಂಧಿಸಿದ್ದಾಗಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀಡಿದ್ದ ಹೇಳಿಕೆ ಅಲ್ಲವೆಂದು ʼವಾರ್ತಾ ಭಾರತಿʼ ಕಂಡುಕೊಂಡಿದೆ.

ತೆಲಂಗಾಣ ಚುನಾವಣೆಗೆ ಮುನ್ನ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, "ಬಿಜೆಪಿ ಮುಸ್ಲಿಂ ಸಮುದಾಯದ ಶೇಕಡಾ ನಾಲ್ಕು ಮೀಸಲಾತಿಯನ್ನು ತೆಗೆದುಹಾಕಿ, ಅದನ್ನು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಹಂಚುವುದಾಗಿ ಘೋಷಿಸಿದ್ದರು. ಇದೇ ವಿಡಿಯೋವನ್ನು ಸೋಮವಾರ (ಎ.22) ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಹಂಚಿಕೊಂಡಿದ್ದಾರೆ.

ಯತ್ನಾಳ್‌ ಟ್ವೀಟ್‌ ಗೆ ನೆಟ್ಟಿಗರು ಪ್ರತಿಕ್ರಿಯಿಸಿ, ಈ ಬಾರಿ ಸೋಲುವ ಹತಾಶೆಯಿಂದ ಬಿಜೆಪಿ ತನ್ನ ಕೊನೆಯ ಅಸ್ತ್ರ ಬಳಸುತ್ತಿದೆ. ಈ ಕ್ರಮದಿಂದ ʼಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್‌ʼ ಹೇಗೆ ಸಾಧ್ಯವಾಗಲಿದೆ ಎಂದು ಪ್ರಶ್ನಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News