ರಾಯಚೂರು | ಸಿಬಿಐ ಸೋಗಿನಲ್ಲಿ ಸೈಬರ್ ವಂಚಕರಿಂದ ವೃದ್ಧೆಗೆ ಬೆದರಿಕೆ ; 1.24 ಕೋಟಿ ರೂ. ವಂಚನೆ
ರಾಯಚೂರು : ಮನಿ ಲಾಂಡರಿಂಗ್ ಆರೋಪದಡಿ ಸಿಬಿಐನಲ್ಲಿ ಪ್ರಕರಣ ದಾಖಲಾಗಿರುವುದಾಗಿ ಬೆದರಿಕೆವೊಡ್ಡಿ ವೃದ್ಧೆಯೊಬ್ಬರಿಗೆ 1.24 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
83 ವರ್ಷದ ವೃದ್ಧೆಯೊಬ್ಬರು ನೀಡಿರುವ ದೂರಿನನ್ವಯ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವೃದ್ಧೆಗೆ ಅಕ್ಟೋಬರ್‌ನಲ್ಲಿ ಕರೆ ಮಾಡಿದ್ದ ದುಷ್ಕರ್ಮಿಗಳು, ಮುಂಬೈ ಪೊಲೀಸರ ಸೋಗಿನಲ್ಲಿ ಮಾತನಾಡಿ, ʼನಿಮ್ಮ ಹೆಸರಿನಲ್ಲಿ ಇನ್ನೊಂದು ನಂಬರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಮನಿ ಲಾಂಡರಿಂಗ್ ಮಾಡಲಾಗುತ್ತಿದೆ. ಸಿಬಿಐನ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸಲಿದ್ದಾರೆʼ ಎಂದು ಬೆದರಿಸಿದ್ದಾರೆ.
ಬಳಿಕ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು, ʼನಿಮ್ಮ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ನಿಮ್ಮ ಬ್ಯಾಂಕ್ ಖಾತೆಯ ಪರಿಶೀಲನೆ ಮಾಡಬೇಕಿದೆ. ನಾವು ಕೇಳಿದ ವಿವರಗಳನ್ನು ನೀಡಬೇಕೆಂದು ಬೆದರಿಸಿ ಆನಂತರ ಹಂತ ಹಂತವಾಗಿ 1.24 ಕೋಟಿ ಹಣ ವರ್ಗಾಯಿಸಿಕೊಂಡಿದ್ದಾರೆʼ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.