ರಾಯಚೂರು | ಸ್ಮಶಾನ ಕಾರ್ಮಿಕರಿಂದ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟನೆ

Update: 2024-12-18 12:00 GMT

ರಾಯಚೂರು : ತಾಲೂಕಿನ ಯರಗೇರಾ ಹೋಬಳಿಯ ಗೋಡಿಹಾಳ ಹಾಗೂ ಯರಗೇರಾ ಗ್ರಾಮಗಳ ಸ್ಮಶಾನ ಕಾರ್ಮಿಕರನ್ನು ಪಂಚಾಯತ್ ನೌಕರರು ಎಂದು ಘೊಷಣೆ ಮಾಡುವಂತೆ ಒತ್ತಾಯಿಸಿ ಯರಗೇರಾ ಗ್ರಾಮ ಪಂಚಾಯತ್ ಕಚೇರಿಯ ಬಳಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘ ರಾಜ್ಯ ಹಾಗೂ ಯರಗೇರಾ ಹೋಬಳಿ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಯರಗೇರಾ ಸೇರಿ ಜಿಲ್ಲೆ ಹಾಗೂ ರಾಜ್ಯದ ಹಲವೆಡೆ ಬಿಟ್ಟಿ ಚಾಕರಿಯಲ್ಲಿ ತೊಡಗಿರುವ ಸ್ಮಶಾನ ಕಾರ್ಮಿಕರು ಮೃತ ದೇಹಗಳನ್ನು ಹೂಳುವುದು, ಕುಣಿ( ಗುಂಡಿ) ತೋಡುವ ಕೆಲಸ ಮಾಡುತ್ತಿದ್ದು, ಅಗತ್ಯ ಗೌರವ ಧನ ನೀಡುತ್ತಿಲ್ಲ. ಸರ್ಕಾರಿ ಸೌಲಭ್ಯವೂ ಮರೀಚಿಕೆಯಾಗಿದೆ. ಪ್ರತಿ ಸಾರ್ವಜನಿಕ ಸ್ಮಶಾನಕ್ಕೆ ಒಬ್ಬರಂತೆ ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ಮಸಣ ನಿರ್ವಹಕರಾನ್ನಾಗಿ ನೇಮಿಸಿಕೊಳ್ಳಬೇಕು. ಎಲ್ಲಾ ಸ್ಮಶಾನಗಳಲ್ಲಿ ಪಾರಂಪಾರೀಕವಾಗಿ ಕಾರ್ಯನಿರ್ವಹಿಸುವ ಮಸಣ ಕಾರ್ಮಿಕರ ಕುಟುಂಬಗಳ ಗಣತಿ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿ ಕುಣಿ ಅಗೆಯುವ ಮತ್ತು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪರಿಗಣಿಸಿ ಪ್ರತಿ ಕುಣಿಗೆ ಕನಿಷ್ಠ3,000 ರೂ. ಕೂಲಿಯನ್ನು ಪಂಚಾಯತ್ ನಿಂದ ಪಾವತಿಸಬೇಕು. ಕೆಲಸಕ್ಕೆ ಬೇಕಾಗುವ ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕು ಎಂದು ಮನವಿ ಮಾಡಿದರು

ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಜಿ.ವಿರೇಶ, ಈ ರಂಗನಗೌಡ, ತಿಪ್ಪಯ್ಯ, ಈರೇಶ, ನಲ್ಲಾರೆಡ್ಡಿ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News