ರಾಯಚೂರು | ನಗರಸಭೆ ಗೋಡೆ ಬರಹಕ್ಕೆ ಅರ್ಜಿ ಆಹ್ವಾನ
Update: 2024-12-18 09:35 GMT
ರಾಯಚೂರು : ಇಲ್ಲಿನ ನಗರಸಭೆಯ ಕಟ್ಟಡದ ಕಚೇರಿಗೆ ಇರುವಂತಹ ನಗರಸಭೆ ಕಾರ್ಯಾಲಯ ರಾಯಚೂರನ್ನು ಹೊಸದಾಗಿ ಮಹಾನಗರಪಾಲಿಕೆ ಕಾರ್ಯಾಲಯ ರಾಯಚೂರು ಎಂದು ಕನ್ನಡ ಮತ್ತು ಇಂಗ್ಲೀಷ್ ಅಕ್ಷರಗಳಲ್ಲಿ ಗೋಡೆಬರಹ ಬರೆಯಲು ಆಸಕ್ತರಿಂದ ಅರ್ಜಿ ಆಹ್ವಾನ ಕರೆಯಲಾಗಿದೆ ಎಂದು ರಾಯಚೂರು ನಗಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
ಪೇಂಟರ್ ಮತ್ತು ಮುಖ್ಯದ್ವಾರದ ಗೇಟಿನ ಮೇಲೆ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿಯ (2) ಮುಖ್ಯದ್ವಾರಕ್ಕೆ ಹಿಂದೆ ಇರುವ ರೀತಿಯಲ್ಲಿ ಹೊಸದಾಗಿ ಮಹಾನಗರಪಾಲಿಕೆ ಕಾರ್ಯಾಲಯ ರಾಯಚೂರು ನಾಮಫಲಕ ಮಾಡಿಸುವುದಕ್ಕೆ ಆಸಕ್ತರಿಂದ ಕೊಟೇಷನ್ ಕರೆಯಲಾಗಿದ್ದು, ಆಸಕ್ತರು 3ದಿನಗಳ ಒಳಗಾಗಿ ನಗರಸಭೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ರಾಯಚೂರು ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.