ಟ್ವಿಟರ್ ಪ್ರೀಮಿಯಂ ಗ್ರಾಹಕರಿಗೆ ಬಂಪರ್ ಆದಾಯ; ವಿವರ ಹಂಚಿಕೊಂಡ ನೆಟ್ಟಿಗರು

Update: 2023-08-10 06:21 GMT

ಟ್ವಿಟರ್ (X) | Photo :NDTV 

ಎಲಾನ್ ಮಸ್ಕ್ ನೇತೃತ್ವದ ಟ್ವಿಟರ್ (X) ಈ ವಾರ ಲಕ್ಷಾಂತರ ಡಾಲರ್‍ ಗಳನ್ನು ತನ್ನ ಪ್ರಿಮಿಯಂ ಗ್ರಾಹಕರಿಗೆ ಜಾಹೀರಾತು ಆದಾಯ ನೀಡಿದೆ. ಇದರಿಂದ ಕಳೆದ ಮೂರು ತಿಂಗಳಲ್ಲಿ ಕನಿಷ್ಠ 15 ಲಕ್ಷ ಇಂಪ್ರೆಷನ್‍ಗಳನ್ನು ಸೃಷ್ಟಿಸಿರುವವರಿಗೆ ಭಾರಿ ಲಾಭವಾಗಲಿದೆ. ರೋಮಾಂಚನಗೊಂಡಿರುವ ಹಲವು ಮಂದಿ ನೆಟ್ಟಿಗರು ಇದರ ವಿವರಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟಿಂಗ್ ಮಾಡಿದ್ದಕ್ಕಾಗಿ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಉದ್ಯೋಗದಾತರು ನಡೆಸಿಕೊಂಡಿದ್ದರಿಂದ ತೊಂದರೆಗೊಳಗಾಧವರಿಗೆ ಕಾನೂನು ಶುಲ್ಕವನ್ನು ನೀಡುವುದಾಗಿ ಘೋಷಿಸಿದ ಕೆಲವೇ ದಿನಗಳಲ್ಲಿ ಮಸ್ಕ್ ಈ ನಿರ್ಧಾರ ಪ್ರಕಟಿಸಿದ್ದಾರೆ.

ತಮ್ಮ ಹೆಸತರಿನ ಮುಂದೆ ಬ್ಲೂ ಚೆಕ್‍ಮಾರ್ಕ್ ಹೊಂದಿರುವ ಎಕ್ಸ್ ನ ಹಲವು ಮಂದಿ ಪ್ರೀಮಿಯಂ ಬಳಕೆದಾರರು ಈ ವಿಷಯವನ್ನು ಮೈಕ್ರೊ ಬ್ಲಾಗಿಂಗ್ ಪ್ಲಾಟ್‍ಫಾರಂನಲ್ಲಿ ಸ್ಕ್ರೀನ್‍ಶಾಟ್‍ಗಳೊಂದಿಗೆ ಹಂಚಿಕೊಂಡಿದ್ದಾರೆ.

"ಟ್ವಿಟರ್ ಇದೀಗ ನನಗೆ ಕಳೆದ 104 ದಿನಗಳಲ್ಲಿ 21,300,000 ಇಂಪ್ರೆಷನ್‍ಗಾಗಿ 12065 ಡಾಲರ್ ಪಾವತಿ ಮಾಡಿದೆ. ಯೂಟ್ಯೂಬ್ ನನಗೆ 1,159,005 ಇಂಪ್ರೆಷನ್‍ಗಳಿಗಾಗಿ 241.31 ಡಾಲರ್ ಪಾವತಿಸಿತ್ತು" ಎಂದು ಬಳಕೆದಾರರೊಬ್ಬರು ವರದಿ ಮಾಡಿದ್ದಾರೆ.

"ವಾವ್ಹ್ ಟ್ವಿಟರ್ ನನಗೆ 12,632 ಡಾಲರ್ ಗಳನ್ನು ಕಳೆದ ತಿಂಗಳ ಆದಾಯದ ಪಾಲಾಗಿ ನೀಡಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ.

ಗ್ರಾಹಕರು ಮಾಡಿದ ಪೋಸ್ಟ್‍ಗಳನ್ನು ಆಧರಿಸಿ ಹತ್ತಾರು ಡಾಲರ್‍ ಗಳಿಂದ ಸಾವಿರಾರು ಡಾಲರ್ ವರೆಗೂ ಆದಾಯ ಬರಲಿದೆ. ಎಕ್ಸ್ ನ್ಯೂಸ್ ಡೈಲಿ ಹ್ಯಾಂಡಲ್ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಇದುವರೆಗಿನ ಗರಿಷ್ಠ ಪಾವತಿ ಆರು ಅಂಕಿಗಳ ಸಂಖ್ಯೆ ಅಂದರೆ 100 ಸಾವಿರ ಡಾಲರ್‍ಗಿಂತ ಅಧಿಕ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News