ಗೂಗಲ್ ಕ್ರೋಮ್ ಬಳಕೆದಾರರು ಬ್ರೌಸರ್ ಅಪ್‍ಡೇಟ್ ಮಾಡಿಕೊಳ್ಳಿ.. ಸರ್ಕಾರ ಎಚ್ಚರಿಕೆ ನೀಡಿರುವುದೇಕೆ?

Update: 2023-08-11 06:18 GMT

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದ ಭಾರತ ಸರ್ಕಾದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ (ಸಿಇಆರ್‍ಟಿ-ಐನ್) ಇತ್ತೀಚೆಗೆ ಗೂಗಲ್ ಕ್ರೋಮ್ ಬಳಕೆದಾರರಿಗೆ ತೀವ್ರ ಎಚ್ಚರಿಕೆಯ ಸಂದೇಶ ನೀಡಿತ್ತು. ಗೂಗಲ್ ಕ್ರೋಮ್‍ನ ಕೆಲ ನಿರ್ದಿಷ್ಟ ಅವತರಣಿಕೆಗಳು ದಾಳಿಗೆ ತುತ್ತಾಗುವ ಭದ್ರತಾ ಅಪಾಯ ಅತ್ಯಧಿಕ ಎಂಬ ಎಚ್ಚರಿಕೆ ನೀಡಿತ್ತು.

ಸಿಇಆರ್‍ಟಿ-ಇನ್ ಎಚ್ಚರಿಕೆಯ ಪ್ರಕಾರ, ಕ್ರೋಮ್ ಬಳಕೆದರರು, ತಮ್ಮ ಸೂಕ್ಷ್ಮ ಮಾಹಿತಿಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕಾದ ಹಲವು ಭದ್ರತಾ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ಫಿಶಿಂಗ್ ದಾಳಿ, ಡಾಟಾ ಭೇದಿಸುವಿಕೆ ಹಾಗೂ ಮಾಲ್‍ವೇರ್ ಸೋಂಕುಗಳಂಥ ಅಪಾಯ ಸಾಧ್ಯತೆಯನ್ನು ಒತ್ತಿ ಹೇಳಿದೆ. ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಬಳಕೆದಾರರು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ಮಾಡಿದೆ.

ಪ್ರಾಂಪ್ಟ್ ಗಳು, ವೆಬ್ ಪಾವತಿ ಎಪಿಐ, ಶಿಫ್ಟ್‍ಶ್ಯಾಡರ್, ವುಲ್ಕನ್, ವಿಡಿಯೊ ಹಾಗೂ ವೆಬ್‍ಆರ್‍ಟಿಸಿ ಸೇರಿದಂತೆ ನಿಮ್ಮ ಕಂಪ್ಯೂಟರ್ ನ ನಿಯಂತ್ರಣವನ್ನು ದಾಳಿಕೋರರು ಪಡೆಯಲು ಅವಕಾಶ ಮಾಡಿಕೊಡುವ ಹಲವು ದೌರ್ಬಲ್ಯಗಳನ್ನು ಗೂಗಲ್ ಕ್ರೋಮ್ ಹೊಂದಿದೆ. "ವಿ8ನಲ್ಲಿ ಟೈಪ್ ಗೊಂದಲದಿಂದಾಗಿ ಗೂಗಲ್ ಕ್ರೋಮ್‍ನಲ್ಲಿ ಹಲವು ದುರ್ಬಲ ಅಂಶಗಳಿವೆ. ದೃಶ್ಯಗಳಲ್ಲಿ ಹೀಪ್ ಬಫರ್ ಓವರ್‍ಫ್ಲೋ, ವೆಬ್‍ಜಿಎಲ್‍ನಲ್ಲಿ ಮಿತಿಮೀರಿದ ಓದು ಹಾಗೂ ಬರಹ, ಎಎನ್‍ಜಿಎಲ್‍ಇನಲ್ಲಿ ಮಿತಿಮೀರಿದ ಮೆಮೊರಿ ಲಭ್ಯತೆ, ಬ್ಲಿಂಕ್ ಟಾಸ್ಕ್ ಶೆಡ್ಯೂಲಿಂಗ್‍ನಲ್ಲಿ ಉಚಿತ ಬಳಕೆ, ಕ್ಯಾಸ್ಟ್ ಮತ್ತು ವೆಬ್‍ಆರ್‍ಟಿಸಿ, ವಿಸ್ತರಣೆಗಳಲ್ಲಿ ಅಸಮರ್ಪಕ ಡಾಟಾ ದೃಢೀಕರಣದಂಥ ಸಮಸ್ಯೆಗಳಿವೆ" ಎಂದು ಅಧಿಕೃತ ಪ್ರಕಟಣೆ ಎಚ್ಚರಿಸಿದೆ.

ಸಿವಿಇ-2023-4068 ರಿಂದ ಸಿಇವಿ-2023-4078ವರೆಗಿನ ದೌರ್ಬಲ್ಯಗಳ ಪಟ್ಟಿಯನ್ನು ಸಿಇಆರ್‍ಟಿ-ಇನ್ ಬಿಡುಗಡೆ ಮಾಡಿದೆ.

ಈ ಹಿನ್ನೆಲೆಯಲ್ಲಿ ನಿಮ್ಮ ಸಾಧನವನ್ನು ರಕ್ಷಿಸಿಕೊಳ್ಳಲು ತಕ್ಷಣ ಅಪ್‍ಡೇಟ್ ಮಾಡಿಕೊಳ್ಳುವಂತೆ ಸಲಹೆ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News