ಲ್ಯಾಪ್‍ಟಾಪ್ ಆಮದು ನಿಷೇಧ: ವಿದೇಶದಿಂದ ನೀವು ಲ್ಯಾಪ್‍ಟಾಪ್ ಖರೀದಿಸಿ ತರಬಹುದೇ?

Update: 2023-08-05 15:09 GMT

ಅಚ್ಚರಿಯ ನಡೆಯೊಂದರಲ್ಲಿ ಭಾರತ, ಹೊರದೇಶಗಳಿಂದ ಲ್ಯಾಪ್‍ಟಾಪ್, ಟ್ಯಾಬ್ಲೆಟ್ ಹಾಗೂ ವೈಯಕ್ತಿಕ ಕಂಪ್ಯೂಟರ್‍ಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ವಿಧಿಸಿತ್ತು. ಶನಿವಾರ ಸರಕಾರ ಲ್ಯಾಪ್ ಟಾಪ್ ಗಳು, ಕಂಪ್ಯೂಟರ್ ಗಳ ಆಮದು ನಿರ್ಬಂಧದ ಆದೇಶ ಅನುಷ್ಠಾನ ಅಕ್ಟೋಬರ್ 31 ರವರೆಗೆ ಮುಂದೂಡಿದೆ.

ಎಲೆಕ್ಟ್ರಾನಿಕ್ ಸಾಧನಗಳನ್ನು ವಿದೇಶಗಳಿಂದ ಮಾರಾಟಕ್ಕಾಗಿ ತರುವ ಸಂಘ ಸಂಸ್ಥೆಗಳು ನಿರ್ಬಂಧಿತ ಆಮದಿಗಾಗಿ ಸೂಕ್ತ ಲೈಸನ್ಸ್ ಹೊಂದಿರಬೇಕು.

ಇದರಿಂದಾಗಿ Apple, Lenovo, HP, Asus, Acer, Samsung ಮತ್ತು ಇತರ ಬ್ರಾಂಡ್‍ಗಳ ವಹಿವಾಟಿಗೆ ಧಕ್ಕೆಯಾಗಲಿದೆ. ಭಾರತೀಯ ಮಾರುಕಟ್ಟೆಗಾಗಿ ಆಮದು ಮಾಡಿಕೊಳ್ಳುವುದನ್ನು ಇವು ಸ್ಥಗಿತಗೊಳಿಸಬೇಕಾಗುತ್ತದೆ.

ದೊಡ್ಡ ಸಂಖ್ಯೆಯ ಲ್ಯಾಪ್‍ಟಾಪ್ ಮತ್ತು ವೈಯಕ್ತಿಕ ಕಂಪ್ಯೂಟರ್‍ಗಳು ಚೀನಾದಲ್ಲಿ ಉತ್ಪಾದನೆಯಾಗುತ್ತವೆ ಅಥವಾ ಜೋಡಿಸಲ್ಪಡುತ್ತಿವೆ. ಸರ್ಕಾರ ಆಮದು ನಿಷೇಧ ಕ್ರಮ ಕೈಗೊಂಡಿರುವ ಹಿಂದಿನ ಮೂಲ ಉದ್ದೇಶವೆಂದರೆ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡುವುದು.

ಹಾಗಾದರೆ ನೀವು ವಿದೇಶದಿಂದ ಕಂಪ್ಯೂಟರ್ ಅಥವಾ ಲ್ಯಾಪ್‍ಟಾಪ್ ಖರೀದಿಸಿ ತರಬಹುದೇ? ಇದಕ್ಕೆ ಉತ್ತರ ಹೌದು ಅಥವಾ ಇಲ್ಲ. ಗೊಂದಲ ಇದೆಯೇ? ವಿದೇಶಗಳಿಗೆ ಪ್ರಯಾಣ ಕೈಗೊಂಡವರು ತಮ್ಮ ಜತೆ ಲ್ಯಾಪ್‍ಟಾಪ್, ಟ್ಯಾಬ್ಲೆಟ್, ಆಲ್ ಇನ್ ವನ್ ವೈಯಕ್ತಿಕ ಕಂಪ್ಯೂಟರ್, ಅಲ್ಟ್ರಾ-ಸ್ಮಾಲ್‍ಗಳನ್ನು ತಮ್ಮ ಲಗೇಜ್ ಜತೆಯಲ್ಲಿ ಆಮದು ನಿರ್ಬಂಧವಿಲ್ಲದೇ ಭಾರತಕ್ಕೆ ಮರಳುವಾಗ ತರಲು ಅವಕಾಶವಿದೆ. ಇ-ಕಾಮರ್ಸ್ ಪ್ಲಾಟ್‍ಫಾರಂಗಳಿಂದ ಖರೀದಿಸಿದ ಮತ್ತು ಅಂಚೆ ಅಥವಾ ಕೊರಿಯರ್ ಮೂಲಕ ಶಿಪ್ಪಿಂಗ್ ಮಾಡಿದ ಅಪ್ಲೈಯನ್ಸಸ್‍ಗಳಿಗೆ ವಿನಾಯ್ತಿ ಇದೆ.

ಸರಳವಾಗಿ ಹೇಳಬೇಕೆಂದರೆ ನೀವು ನಿಮ್ಮ ವೈಯಕ್ತಿಕ ಬಳಕೆಗೆ ಅಥವಾ ಉಡುಗೊರೆ ನೀಡಲು ತರಲು ಅವಕಾಶವಿದೆ. ಆದರೆ ಅವುಗಳನ್ನು ಭಾರತದಲ್ಲಿ ಮಾರಾಟ ಮಾಡುವಂತಿಲ್ಲ. ಇದರ ಜತೆಗೆ ಇದಕ್ಕೆ ಕಸ್ಟಮ್ಸ್ ಸುಂಕವನ್ನೂ ನೀವು ನೀಡಬೇಕಾಗುತ್ತದೆ.

ಕೃಪೆ: indiatoday.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News