ದೇಶದಲ್ಲಿ Ransomware, ಐಓಟಿ ಸೈಬರ್ ದಾಳಿ ಗಣನೀಯ ಹೆಚ್ಚಳ.

Update: 2023-08-07 09:27 GMT

ಸಾಂದರ್ಭಿಕ ಚಿತ್ರ

ದೇಶದಲ್ಲಿ 2023ರ ಮೊದಲಾರ್ಧದಲ್ಲಿ ರಾನ್ಸಮ್‍ವೇರ್ (Ransomware) ಹಾಗೂ ಐಓಟಿ ಸೈಬರ್ ದಾಳಿಗಳು ಗಣನೀಯವಾಗಿ ಹೆಚ್ಚಿದ್ದು, ಅಪರಾಧಿಗಳು ತಮ್ಮ ದುರುದ್ದೇಶದ ಚಟುವಟಿಕೆಗಳಿಗೆ ರಹಸ್ಯ ವಿಧಾನಗಳನ್ನು ಕಂಡುಕೊಂಡಿದ್ದಾರೆ.

ಅಮೆರಿಕ ಮತ್ತು ಬ್ರಿಟನ್‍ನಂಥ ದೇಶಗಳಲ್ಲಿ ರಾನ್ಸಮ್‍ವೇರ್ ದಾಳಿ ಪ್ರಮಾಣ ಕಡಿಮೆಯಾಗಿದ್ದರೆ ಭಾರತ (ಶೇಕಡ 133ರಷ್ಟು ಹೆಚ್ಚಳ) ಮತ್ತು ಜರ್ಮನಿ (52 ಶೇಕಡ ಅಧಿಕ) ಯಲ್ಲಿ ಇಂಥ ದಾಳಿಗಳು ಗಣನೀಯವಾಗಿ ಹೆಚ್ಚಿವೆ ಎಂದು ಸೈಬರ್ ಅಪಾಯ ಕುರಿತ ಸೊನಿಕ್‍ವಾಲ್ ವರದಿ ಸ್ಪಷ್ಟಪಡಿಸಿದೆ.

ಜಾಗತಿಕ ಮಟ್ಟದಲ್ಲಿ ಇತರ ವೈವಿಧ್ಯಮಯ ದಾಳಿಗಳು ಕಂಡುಬಂದಿವೆ. ಇದರಲ್ಲಿ ಕ್ರಿಪ್ಟೋಜ್ಯಾಕಿಂಗ್ (399%) ಐಓಟಿ ಮಾಲ್‍ವೇರ್ (37%), ಎನ್‍ಕ್ರಿಪ್ಟೆಡ್ ಥ್ರೆಟ್ಸ್ (22) ಅಧಿಕವಾಗಿದೆ. ರಾನ್ಸಮ್‍ವೇರ್ ದಾಳಿಯಲ್ಲಿ ಜಾಗತಿಕ ಮಟ್ಟದಲ್ಲಿ ಶೇಕಡ 41ರಷ್ಟು ಇಳಿಕೆ ಕಂಡುಬಂದಿದೆ.

ಸೈಬರ್ ಅಪರಾಧಿಗಳು ತಮ್ಮ ಕೌಶಲವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ ಹಾಗೂ ವೈವಿಧ್ಯಮಯವಾಗಿಸಿಕೊಂಡಿದ್ದು ಪ್ರಮುಖ ಮೂಲಸೌಕರ್ಯಗಳ ಮೇಳೆ ದಾಳಿಗೆ ಯೋಜಿಸಿದ್ದಾರೆ. ಇದರಿಂದ ಇಂಥ ಅಪಾಯಗಳು ಹೆಚ್ಚು ಸಂಕೀರ್ಣವಾಗಿದ್ದು, ಸಂಸ್ಥೆಗಳು ತಮ್ಮ ಭದ್ರತಾ ಅಗತ್ಯತೆಗಳನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಮರು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ.

ಕ್ರಿಪ್ಟೋ ದಾಳಿಗಳ ಹೆಚ್ಚಳ ಭಾರತದಲ್ಲಿ ಕಡಿಮೆ. ಆದರೆ ರಾನ್ಸಮ್‍ವೇರ್ ಮತ್ತು ಐಓಟಿ ದಾಳಿಗಳು ಗಣನೀಯವಾಗಿ ಹೆಚ್ಚಿವೆ. ಇದು ಭಾರತೀಯ ಆರ್ಥಿಕ ಮಹತ್ವಾಕಾಂಕ್ಷೆಗೆ ಗಂಭೀರ ಅಪಾಯವಾಗಿದೆ. ತಮ್ಮ ಕಾರ್ಯಾಚರಣೆ ಡಿಜಿಟಲೀಕರಣಕ್ಕೆ ಮುಂದಾಗಿರುವ ಫಾರ್ಮಸ್ಯೂಟಿಕಲ್ ಕಂಪನಿಗಳು ಹೆಚ್ಚು ದಾಳಿಗೆ ತುತ್ತಾಗುತ್ತಿವೆ" ಎಂದು ಎಪಿಜೆ ಸೊನಿಕ್‍ವಾಲ್‍ನ ಪ್ರಾದೇಶಿಕ ಉಪಾಧ್ಯಕ್ಷ ದೇಬಾಶಿಶ್ ಮುಖರ್ಜಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushina

A staff reporter

Web Editor at VarthaBharati

Byline - ವಾರ್ತಾಭಾರತಿ

contributor

Similar News