ಜೂ.22ರಿಂದ ಬಿಜೆಪಿ ಏಳು ತಂಡಗಳಿಂದ ರಾಜ್ಯ ಪ್ರವಾಸ: ರವಿಕುಮಾರ್

Update: 2023-06-17 18:15 GMT

ಬೆಂಗಳೂರು, ಜೂ. 17: ‘ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಸಂದರ್ಭದಲ್ಲಿ ಬಿಜೆಪಿಯ ಏಳು ತಂಡಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿವೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.

ಶನಿವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ತಂಡಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿವೆ. 22ರಿಂದ 26ರ ಒಳಗೆ ರಾಜ್ಯದ ಪ್ರವಾಸ ಮುಕ್ತಾಯವಾಗಲಿದೆ. ಬಿಜೆಪಿ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು.

ವಿಧಾನಸಭಾ ಚುನಾವಣೆಯಲ್ಲಿ ಆದ ಸೋಲಿನ ಆಘಾತ ಆಗಿತ್ತು. ಮೋದಿಯವರ ಸರಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವ ದೃಷ್ಟಿಯಿಂದ ಕಾರ್ಯಕರ್ತರಲ್ಲಿ ಸ್ಫೂರ್ತಿ ತುಂಬಲಾಗುತ್ತದೆ. ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ 26ರಿಂದ ಜುಲೈ 5ರ ವರೆಗೆ ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ‘ಮನೆ ಮನೆಗೆ ಮೋದಿ’ ಕರಪತ್ರ ವಿತರಿಸಲಾಗುವುದು. ಮೋದಿಯವರ ಸರಕಾರದ ಸಾಧನೆಗಳನ್ನು 50 ಲಕ್ಷ ಮನೆಗಳಿಗೆ ತಲುಪಿಸುತ್ತೇವೆ ಎಂದು ಹೇಳಿದರು.

ಹಿರಿಯ ಮುಖಂಡ ಬಿಎಸ್‍ವೈ ಅವರ ತಂಡದಲ್ಲಿ ಗೋವಿಂದ ಕಾರಜೋಳ, ನಾರಾಯಣಸ್ವಾಮಿ, ಪ್ರತಾಪ ಸಿಂಹ, ಪಿ.ಸಿ.ಮೋಹನ್, ಮುದ್ದುಹನುಮೇಗೌಡ, ಜಿ.ಎಸ್.ಬಸವರಾಜು, ಎಂ.ಪಿ.ರೇಣುಕಾಚಾರ್ಯ, ಮಾಧುಸ್ವಾಮಿ, ತೇಜಸ್ವಿ ಸೂರ್ಯ ಇರಲಿದ್ದಾರೆ. ಈ ತಂಡವು ದಾವಣಗೆರೆ, ಚಿತ್ರದುರ್ಗ, ಮಧುಗಿರಿ, ತುಮಕೂರು, ಬೆಂ.ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.

ರಾಜ್ಯಾಧ್ಯಕ್ಷ ನಳಿಕುಮಾರ್ ಕಟೀಲ್ ನೇತೃತ್ವದ ತಂಡದಲ್ಲಿ ಶ್ರೀರಾಮುಲು, ಭಗವಂತ ಖೂಬಾ, ಎಂ.ಪಿ. ದೇವೇಂದ್ರಪ್ಪ, ರಾಜೂಗೌಡ, ಪಿ.ವಿ.ನಾಯಕ್, ಕರಡಿ ಸಂಗಣ್ಣ, ಎಂ.ಪಿ.ಪ್ರಕಾಶ್ ಪುತ್ರಿ ಎಂ.ಪಿ.ಸುಮಾ ವಿಜಯ್ ಇರುವರು. ಇವರು ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲಾ ಪ್ರವಾಸ ಮಾಡಲಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಂಡದಲ್ಲಿ ರಮೇಶ್ ಜಿಗಜಿಣಗಿ, ಗದ್ದಿಗೌಡರ, ಮಂಗಳಾ ಸುರೇಶ್ ಅಂಗಡಿ, ಬಸನಗೌಡ ಪಾಟೀಲ ಯತ್ನಾಳ್, ರಮೇಶ್ ಜಾರಕಿಹೊಳಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಬೈರತಿ ಬಸವರಾಜು, ವೀರಣ್ಣ ಚರಂತಿಮಠ, ರಮೇಶ್ ಕತ್ತಿ ಭಾಗವಹಿಸಲಿದ್ದು, ಈ ತಂಡವು ವಿಜಯಪುರ, ಬಾಗಲಕೋಟೆ, ಬೆಳಗಾವಿ ನಗರ, ಗ್ರಾಮಾಂತರ ಮತ್ತು ಚಿಕ್ಕೋಡಿಗಳಲ್ಲಿ ಪ್ರವಾಸ ಮಾಡಲಿದೆ.

ಆರ್.ಅಶೋಕ್ ತಂಡದಲ್ಲಿ ಪ್ರತಾಪಸಿಂಹ, ಎಸ್.ಟಿ.ಸೋಮಶೇಖರ್, ಕೆ.ಜಿ.ಬೋಪಯ್ಯ, ಎ.ಟಿ. ರಾಮಸ್ವಾಮಿ, ಪಿ.ಸಿ.ಮೋಹನ್, ಮುನಿಸ್ವಾಮಿ, ಪ್ರೀತಂಗೌಡ, ಅಪ್ಪಚ್ಚು ರಂಜನ್, ಮಂಜುನಾಥ್ ಅವರು ಪಾಲ್ಗೊಳ್ಳುವರು. ಇವರು ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲಾ ಪ್ರವಾಸ ಮಾಡಲಿದೆ.ಜೂ.22ರಿಂದ ಬಿಜೆಪಿ ಏಳು ತಂಡಗಳಿಂದ ರಾಜ್ಯ ಪ್ರವಾಸ: ರವಿಕುಮಾರ್

ಪ್ರಹ್ಲಾದ್ ಜೋಷಿ ಮತ್ತು ಸಿ.ಟಿ.ರವಿ ನೇತೃತ್ವದ ತಂಡವು ವಿಶ್ವೇಶ್ವರ ಹೆಗಡೆ ಕಾಗೇರಿ, ಸುನಿಲ್‍ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ವಿಜಯೇಂದ್ರ, ಪ್ರಮೋದ್ ಮಧ್ವರಾಜ್, ಬಿ.ವೈ.ವಿಜಯೇಂದ್ರ, ಶಿವರಾಮ ಹೆಬ್ಬಾರ್, ದಿನಕರ್ ಶೆಟ್ಟಿ, ಅರಗ ಜ್ಞಾನೇಂದ್ರ, ವೇದವ್ಯಾಸ ಕಾಮತ್‍ರನ್ನು ಒಳಗೊಂಡಿರುತ್ತದೆ. ಇವರು ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ವಿವರ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News