ಮಂಗಳೂರು: ಸೌದಿ ಅರೇಬಿಯಾದಲ್ಲಿ ಹರೇಕಳದ ಹಜ್ಜ್ ಯಾತ್ರಿಕ LGM ಉಮರಬ್ಬ ನಿಧನ

Update: 2023-07-05 11:13 GMT

ಮಂಗಳೂರು, ಜೂನ್ 5: ಹಜ್ ಯಾತ್ರೆಗೆ ತರಳಿದ್ದ ನ್ಯೂಪಡ್ಪು ನಿವಾಸಿ, LGM ಉಮರಬ್ಬ ರವರು ಮಕ್ಕಾದ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾಗಿದ್ದಾರೆ.

ನ್ಯೂಪಡ್ಪು ತ್ವಾಹ ಜುಮಾ ಮಸೀದಿ ಇದರ ಮಾಜಿ ಅಧ್ಯಕ್ಷರಾಗಿದ್ದ ಇವರು ಪ್ರಸ್ತುತ ಬಂದರಿನ ಕಂದಕ್ ನಲ್ಲಿ ನೆಲೆಸಿದ್ದರು.

ಈ ವರ್ಷದ ಪವಿತ್ರ ಹಜ್ಜ್ ಯಾತ್ರೆ ನಿಮಿತ್ತ ಪತ್ನಿಯೊಂದಿಗೆ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಪುಣ್ಯ ಮಕ್ಕಾದಲ್ಲಿ ಹಜ್ಜ್ ಕರ್ಮ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅರೋಗ್ಯ ಹದೆಗೆಟ್ಟು, ಮಕ್ಕಾದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಪತ್ನಿ, ಪುತ್ರಿ ಹಾಗು ಅಪಾರ ಬಂಧು ಬಳಗವನ್ನು ಆಗಲಿದ್ದಾರೆ.

ಸಂತಾಪ:

SYS ನ್ಯೂಪಡ್ಪು ಶಾಖೆಯ ಮಾಜಿ ಅಧ್ಯಕ್ಷರು, ಪ್ರಸ್ತುತ ಕರ್ನಾಟಕ ಮುಸ್ಲಿಂ ಜಮಾಅತ್ ನ್ಯೂಪಡ್ಪು ಶಾಖೆಯ ಅಧ್ಯಕ್ಷರು ಆಗಿದ್ದ LGM ಉಮರಬ್ಬರವರ ನಿಧನಕ್ಕೆ KMJ, SYS, SSF ನೂಪಡ್ಪು ಶಾಖಾ ನಾಯಕರು ಹಾಗೂ ತ್ವಾಹ ಜುಮಾ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಜನಾಬ್ ಖಾಲಿದ್ ಹಾಜಿ, ಖಿದ್ಮತುಲ್ ಇಸ್ಲಾಮ್ ಯಂಗ್ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ರಶೀದ್ ಹೆಚ್, TJM ಗಲ್ಫ್ ಸಮಿತಿ ಅಧ್ಯಕ್ಷ ಮುಹಮ್ಮದ್ ಹಕೀಮ್ ಸಂತಾಪ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News