600 ಕಾರುಗಳ ಬೆಂಗಾವಲಿನೊಂದಿಗೆ ಪಂಢರಪುರ ಪಟ್ಟಣಕ್ಕೆ ಕೆಸಿಆರ್: ಇದು ಕಳವಳಕಾರಿ ಎಂದ ಶರದ್ ಪವಾರ್

ನೆರೆಯ ರಾಜ್ಯದ ಮುಖ್ಯಮಂತ್ರಿಯೊಬ್ಬರು ಪ್ರಾರ್ಥನೆ ಸಲ್ಲಿಸಲು ಬಂದರೆ ಆಕ್ಷೇಪಿಸಲು ಯಾವುದೇ ಕಾರಣವಿಲ್ಲ. ಆದರೆ ಬೃಹತ್ ಸಂಖ್ಯೆಯ ವಾಹನಗಳೊಂದಿಗೆ ಶಕ್ತಿ ಪ್ರದರ್ಶಿಸುವ ಪ್ರಯತ್ನ ಕಳವಳಕಾರಿಯಾಗಿದೆ. ಚಂದ್ರಶೇಖರ ರಾವ್ ಅವರ ಭೇಟಿಯು ಉಭಯ ರಾಜ್ಯಗಳ ನಡುವಿನ ಸಹಕಾರವನ್ನು ಹೆಚ್ಚಿಸುವತ್ತ ಗಮನಹರಿಸಿದ್ದರೆ ಉತ್ತಮ

Update: 2023-06-28 07:13 GMT

ಪುಣೆ: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಮಂಗಳವಾರ ಬೃಹತ್ ವಾಹನ ಜಾಥಾದೊಂದಿಗೆ ಮಹಾರಾಷ್ಟ್ರದ ಪಂಢರಪುರ ಪಟ್ಟಣಕ್ಕೆ ಆಗಮಿಸಿದ್ದನ್ನು ಖಂಡಿಸಿದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್, "ಬಲವನ್ನು ಪ್ರದರ್ಶಿಸುವ" ಈ ಪ್ರಯತ್ನವು ಕಳವಳಕಾರಿಯಾಗಿದೆ ಎಂದು ಹೇಳಿದ್ದಾರೆ.

ದಕ್ಷಿಣ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಢರಪುರದಲ್ಲಿರುವ ಪ್ರಸಿದ್ಧ ವಿಠ್ಠಲ-ರುಕ್ಮಿಣಿ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದ ಚಂದ್ರಶೇಖರ ರಾವ್, ಭಾರತ ರಾಷ್ಟ್ರ ಸಮಿತಿ (BRS) ಯ ನೆಲೆಯನ್ನು ರಾಜ್ಯದಲ್ಲಿ ವಿಸ್ತರಣೆಯ ಪ್ರಯತ್ನದ ಭಾಗವಾಗಿ ಮಂಗಳವಾರ ಸರ್ಕೋಲಿ ಗ್ರಾಮದಲ್ಲಿ ರ್ಯಾಲಿ ನಡೆಸಿದರು.

ಸೋಮವಾರ 600 ಕಾರುಗಳ ವಾಹನ ಜಾಥಾದೊಂದಿಗೆ ರಾಜ್ಯಕ್ಕೆ ಆಗಮಿಸಿದರು.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್, ನೆರೆಯ ರಾಜ್ಯದ ಮುಖ್ಯಮಂತ್ರಿಯೊಬ್ಬರು ಪ್ರಾರ್ಥನೆ ಸಲ್ಲಿಸಲು ಬಂದರೆ ಆಕ್ಷೇಪಿಸಲು ಯಾವುದೇ ಕಾರಣವಿಲ್ಲ. ಆದರೆ ಬೃಹತ್ ಸಂಖ್ಯೆಯ ವಾಹನಗಳೊಂದಿಗೆ ಶಕ್ತಿ ಪ್ರದರ್ಶಿಸುವ ಪ್ರಯತ್ನ ಕಳವಳಕಾರಿಯಾಗಿದೆ. ಚಂದ್ರಶೇಖರ ರಾವ್ ಅವರ ಭೇಟಿಯು ಉಭಯ ರಾಜ್ಯಗಳ ನಡುವಿನ ಸಹಕಾರವನ್ನು ಹೆಚ್ಚಿಸುವತ್ತ ಗಮನಹರಿಸಿದ್ದರೆ ಉತ್ತಮ ಎಂದು ಪವಾರ್ ಹೇಳಿದರು

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News