ಕಲಬುರಗಿ: ಪೊಲೀಸ್ ಕಾನ್ ಸ್ಟೇಬಲ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Update: 2023-07-06 11:45 GMT

ಕಲಬುರಗಿ: ಪೊಲೀಸ್ ಅಧಿಕಾರಿಗಳ ಒತ್ತಡ ಹಾಗೂ ವರ್ಗಾವಣೆಗೆ ಮನನೊಂದು ನಗರದ ಸಂಚಾರಿ ಪೊಲೀಸ್ ಠಾಣೆ ಸಿಪಿಸಿ ಓರ್ವರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ಕಲಬುರಗಿ ನಗರದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಸಂಚಾರಿ ಪೊಲೀಸ್ ಠಾಣೆ-1 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಪಿಸಿ ಚಂದ್ರಕಾಂತ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆತ್ಮಹತ್ಯೆಗೆ ಯತ್ನಿಸಿರುವ ಪೊಲೀಸ್ ಪೇದೆಯ ಸಹೋದ್ಯೋಗಿ, 10-15 ವರ್ಷಗಳಿಂದ ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳು ಪೊಲೀಸ್ ಪೇದೆಗಳಿಗೆ ನಿರಂತರ ಒಂದಲ್ಲ ಒಂದು ರೀತಿಯಲ್ಲಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನು ತಡೆಯದೇ ಹೋದರೆ ಮುಂದಿನ ದಿನಗಳಲ್ಲಿ ಹಲವು ಪೊಲೀಸ್ ಪೇದೆಗಳು ಮೇಲಧಿಕಾರಿಗಳ ಕಿರುಕುಳಕ್ಕೆ ಬಲಿಯಾಗಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿ ತಕ್ಷಣ 10-15 ವರ್ಷಗಳ ಕಾಲ ಒಂದೇ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕಾನ್ ಸ್ಟೇಬಲ್ ಗಳ ಜೀವ ಉಳಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.

ಸರಕಾರದ ಆದೇಶದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಐಪಿಎಸ್ ಚೇತನ್ ಆರ್ ಅವರು ವಿವಿಧ ಠಾಣೆಯ 34 ಪೊಲೀಸ್ ಸಿಬ್ಬಂದಿಗಳನ್ನು ಏಕಕಾಲಕ್ಕೆ ಸಾರ್ವತ್ರಿಕವಾಗಿ ವರ್ಗಾವಣೆ ಮಾಡಿ ಆದೇಶ ಹೋರಡಿಸಿದ್ದಾರೆ.

ಇದರಲ್ಲಿ ಆರ್.ಜಿ ನಗರ ಪೊಲೀಸ್ ಠಾಣೆ, ಸಬ್ ಅರ್ಬನ್ ಪೊಲೀಸ್ ಠಾಣೆ, ಸಂಚಾರಿ ಪೊಲೀಸ್ ಠಾಣೆ-1, ಬ್ರಹ್ಮಪುರ, ಚೌಕ್, ಅಶೋಕ ನಗರ, ಡಿಸಿಪಿ, ಸಿಸಿಆರ್ ಬಿ, ಸ್ಟೇಷನ್ ಬಜಾರ್, ಎಂ.ಬಿ ನಗರ ವಿಶ್ವವಿದ್ಯಾಲಯ, ಫರತಬಾದ್, ಎಸಿಪಿ ಸೌತ್ ಉಪ ವಿಭಾಗದ ಪೊಲೀಸ್ ಕಾನ್ ಸ್ಟೇಬಲ್ ಗಳು ನಗರದ ಪ್ರದೇಶದ ವ್ಯಪ್ತಿಯಲ್ಲಿ ವರ್ಗಾವಣೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News