ಬಿಕರ್ನಕಟ್ಟೆ: ಭಾರೀ ಗಾಳಿಗೆ ಹೋರ್ಡಿಂಗ್ ಬಿದ್ದು ವಾಹನಗಳು ಜಖಂ; ತಪ್ಪಿದ ಭಾರೀ ಅನಾಹುತ

Update: 2023-07-05 08:22 GMT

ಮಂಗಳೂರು, ಜು. 5: ಭಾರೀ ಗಾಳಿಯೊಂದಿಗೆ ಸುರಿದ ಮಳೆಯ ಪರಿಣಾಮ ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಕಟ್ಟಡದ ಮೇಲಿದ್ದ ಭಾರೀ ಗಾತ್ರದ ಹೋರ್ಡಿಂಗ್ ಬಿದ್ದ ಪರಿಣಾಮ ರಸ್ತೆ ಬದಿ ಪಾರ್ಕ್ ಮಾಡಲಾಗಿದ್ದ ಹಲವು ವಾಹನಗಳು ಜಖಂಗೊಂಡಿರುವ ಬಗ್ಗೆ ವರದಿಯಾಗಿದೆ.

ಈ ಪ್ರದೇಶದಲ್ಲಿ ಶಾಲಾ ಮಕ್ಕಳ ವಾಹನಗಳು ಸಂಚರಿಸುತ್ತಿರುತ್ತವೆ. ಶಾಲಾ ಕಾಲೇಜು ರಜೆ ಇದ್ದ ಕಾರಣ ಈ ಘಟನೆ ಸಂಭವಿಸುವ ಸಂದರ್ಭ ಜನರ ಓಡಾಟ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಸುಮಾರು 50 ವರ್ಷಗಳಿಗೂ ಹಿಂದಿನ ಕಟ್ಟಡದಲ್ಲಿ ಎರಡೆರಡು ಟವರ್ಗಳನ್ನು ಕೂಡಾ ಅಳವಡಿಸಲಾಗಿದೆ. ಇದು ಯಾವತ್ತಿಗೂ ಅಪಾಯಕಾರಿಯೇ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ .

‘ಹೋರ್ಡಿಂಗ್ ಬಿದ್ದ ಪರಿಣಾಮ ಪಾರ್ಕ್ ಮಾಡಲಾಗಿದ್ದ 12ಕ್ಕೂ ಅಧಿಕ ವಾಹನಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳೂ ಬಿದ್ದು ಹಾನಿಯಾಗಿವೆ. ಮನಪಾ ಅಧಿಕಾರಿಗಳು ತುರ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿತ್ಯ ಜನಸಂಚಾರವಿರುವ, ಈ ಜಾಗದಲ್ಲಿ ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಾಪಾಯ ನಡೆದಿಲ್ಲ’ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಮೇಯರ್ ಜಯಾನಂದ ಅಂಚನ್ ತಿಳಿಸಿದ್ದಾರೆ.

 

 Full View

 

 

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News