ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಪೊಲೀಸ್ ಪೇದೆ ಸೇರಿದಂತೆ ಮೂವರು ಮೃತ್ಯು
ಇಂಫಾಲ: ರಾಜ್ಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದ ಪರಿಣಾಮವಾಗಿ ಕಳೆದ ಎರಡು ದಿನಗಳಲ್ಲಿ ಮಣಿಪುರದಲ್ಲಿ ಪೊಲೀಸ್ ಪೇದೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಮಣಿಪುರದ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಘರ್ಷಣೆಯ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆಯು ಹರಾಥೆಲ್ ಗ್ರಾಮದಲ್ಲಿ ಶಸ್ತ್ರಸಜ್ಜಿತ ಬಂಡುಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಪರಿಸ್ಥಿತಿ ಉಲ್ಬಣಗೊಳ್ಳದಂತೆ ತಡೆಯಲು ಸಮೀಪದಲ್ಲಿ ನೆಲೆಸಿದ್ದ ಸೈನಿಕರನ್ನು ಸಜ್ಜುಗೊಳಿಸಿದೆ ಎಂದು ಹೇಳಿದೆ.
ಸೇನಾ ಹೇಳಿಕೆಯ ಪ್ರಕಾರ ಹೆಡ್ ಕಾನ್ ಸ್ಟೇಬಲ್ ಲೆಂಗ್ಲಾಮ್ ಡಿಮ್ಂಗೆಲ್ ಅವರು ಸಶಸ್ತ್ರ ಜನಸಮೂಹ ದಾಳಿ ಮಾಡಿದಾಗ ಗುಂಡೇಟಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ.
ಗುರುವಾರ ರಾತ್ರಿ ಕಾಂಗ್ಪೊಕ್ಪಿಯಲ್ಲಿರುವ ಸೂಪರಿಂಟೆಂಡೆಂಟ್ ಕಚೇರಿಗೆ ಪೊಲೀಸರ ಶವವನ್ನು ತರಲಾಯಿತು.
"ಬದ್ಧತೆ ಮತ್ತು ಪ್ರಾಮಾಣಿಕ ಹೆಡ್ ಕಾನ್ ಸ್ಟೇಬಲ್ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೋಜ್ ಪ್ರಭಾಕರ್ ಅವರು,ಹೇಳಿದರು.