ಡಿಪಿಯಲ್ಲಿ ತ್ರಿವರ್ಣ ಧ್ವಜ ಹಾಕದ ಆರೆಸ್ಸೆಸ್, ವಿಹಿಂಪ: ಸಾಮಾಜಿಕ ಜಾಲತಾಣದಲ್ಲಿ ಸಂಘ ಪರಿವಾರದ ವಿರುದ್ಧ ಜನರ ಆಕ್ರೋಶ

Update: 2023-08-15 07:39 GMT

Photo: Twitter

ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭಾರತೀಯರು ತಮ್ಮ ದೇಶಪ್ರೇಮವನ್ನು ತೋರ್ಪಡಿಸಲು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಡಿಪಿಗಳಿಗೆ ತಿರಂಗದ ಚಿತ್ರ ಹಾಕುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಆರೆಸ್ಸೆಸ್ ಹಾಗೂ ಅದರ ನಾಯಕರು ಯಾವುದೇ ಗಂಭೀರ ಪರಿಗಣನೆಯನ್ನು ನೀಡಿಲ್ಲ.

ಆರೆಸ್ಸೆಸ್ ನ ಅಧಿಕೃತ X (ಹಿಂದಿನ ಟ್ವಿಟರ್)‌ ಖಾತೆ, ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಸೇರಿದಂತೆ, ಅದರ ನಾಯಕರಾದ ಮೋಹನ್‌ ಭಾಗವತ್‌, ದತ್ತಾತ್ರೇಯ ಹೊಸಬಾಳೆ, ಸುರೇಶ್‌ ಜೋಶಿ ಮೊದಲಾದ ಹಿರಿಯ ನಾಯಕರು ಕೂಡಾ ತಿರಂಗವನ್ನು ತಮ್ಮ ಡಿಪಿಯಲ್ಲಿ ಹಾಕಿಲ್ಲ, ಅಥವಾ ಬದಲಾಯಿಸಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ಅವರ ಪಕ್ಷದ ಮಾತೃ ಸಂಸ್ಥೆ ಹಾಗೂ ಅದರ ನಾಯಕರೇ ಪರಿಗಣಿಸದಿರುವುದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಬಳಿಕವೂ ಆರೆಸ್ಸೆಸ್ ಅದನ್ನು ಪಾಲಿಸಿಲ್ಲ, ಆರೆಸ್ಸೆಸ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಆರೆಸ್ಸೆಸ್ ನಿಜವಾದ ಭಾರತ ವಿರೋಧಿ ಎಂದು ನೆಟ್ಟಿಗರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.

ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಕೊಡುಗೆ ಇಲ್ಲದ ಕಾರಣ, ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರೂ ಅವರು ರಾಷ್ಟ್ರ ಧ್ವಜವನ್ನು ಹಾರಿಸಿಲ್ಲದ ಕಾರಣ, ಕಾರಣ ಅವರು ತಮ್ಮ ಡಿಪಿಯನ್ನು ಬದಲಾಯಿಸಿಲ್ಲ ಎಂದು ಮದಿಮಾರನ್‌ ಎಂಬವರು ಟ್ವೀಟ್‌ ಮಾಡಿದ್ದಾರೆ. ದತ್ತಾತ್ರೇಯ ಹೊಸಬಾಳೆ, ಮೋಹನ್‌ ಭಾಗವತ್‌, ಮೊದಲಾದ ಆರೆಸ್ಸೆಸ್ ನಾಯಕರು ತಮ್ಮ ಡಿಪಿಗಳನ್ನು ಬದಲಾಯಿಸದಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ನಿಮ್ಮ ದೇಶಭಕ್ತಿಯನ್ನು ತೋರಿಸಲು ನಿಮ್ಮ ಡಿಪಿಯನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸಿ ಎಂದು ಹೇಳುತ್ತಾರೆ. ಆರೆಸ್ಸೆಸ್ ಡಿಪಿಯನ್ನು ರಾಷ್ಟ್ರಧ್ವಜಕ್ಕೆ ಬದಲಾಯಿಸುವುದಿಲ್ಲ. ಆರೆಸ್ಸೆಸ್ ನಲ್ಲಿ ದೇಶಪ್ರೇಮಕ್ಕಿಂತ ಕೋಮುವಾದಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ ಎಂದು ಇನ್ನೊಬ್ಬ ನೆಟ್ಟಿಗರು ಟ್ವೀಟ್‌ ಮಾಡಿದ್ದಾರೆ.



ʼಮೋದಿಜಿ ನಿಮ್ಮ ಮಾಲಕರು ಯಾವಾಗ ಡಿಪಿ ಬದಲಾಯಿಸುತ್ತಾರೆ?ʼ ಸಂದೀಪ್‌ ಆಝಾದ್‌ ಎಂಬವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News