LIVE : ʼಮಹಾʼ ಜನಾದೇಶ 2024 | ಮಹಾರಾಷ್ಟ್ರ, ಜಾರ್ಖಂಡ್ ಚುನಾವಣಾ ಫಲಿತಾಂಶ
ಹೊಸದಿಲ್ಲಿ: ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆಗೆ ನಡೆಯುತ್ತಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಿದ್ದು ಕ್ಷಣ ಕ್ಷಣಕ್ಕೂ ಫಲಿತಾಂಶ ರೋಚಕತೆ ಪಡೆಯುತ್ತಿದೆ.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ youtube.com/varthabharatinews ಹಾಗೂ ವೆಬ್ ಸೈಟ್ www.varthabharati.in ವೀಕ್ಷಿಸಿ.
ಸಿಕ್ಕಿಂ | ಎರಡೂ ಕ್ಷೇತ್ರದಲ್ಲಿ ಎಸ್ ಕೆ ಎಂ ಪಕ್ಷದ ಅಭ್ಯರ್ಥಿಗಳಿಗೆ ಜಯ. ನಾಂಮ್ಚಿ ಕ್ಷೇತ್ರದಿಂದ ಸತೀಶ್ ಚಂದ್ರ ರಾಯ್, ಸೊರೆಂಗ್ ಕ್ಷೇತ್ರದಿಂದ ಆದಿತ್ಯ ಗೊಲಾಯ್ ತಮಂಗ್ ಜಯಗಳಿಸಿದ್ದಾರೆ.
ಮೇಘಾಲಯ | ಗಂಬೆರ್ಗೆ ಮೀಸಲು ಕ್ಷೇತ್ರದಲ್ಲಿ ಎನ್ ಪಿ ಪಿ ಅಭ್ಯರ್ಥಿ ಮೆಹ್ತಾಬ್ ಚಂದೀ ಅಜಿಟೊಕ್ ಸಂಗ್ಮಾ ಗೆ ಜಯ
ಉತ್ತರಾಖಂಡ | ಕೇದರನಾಥ್ ಕ್ಷೇತ್ರದಲ್ಲಿ ಬಿಜೆಪಿಯ ಆಶಾ ನೌಟಿಯಾಲ್ ಗೆ ಜಯ
ಪಂಜಾಬ್ | ತಲಾ ಒಂದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಜಯ
ಅಸ್ಸಾಂ | ತಲಾ ಒಂದು ಕ್ಷೇತ್ರಗಳಲ್ಲಿಲ್ಲಿ ಬಿಜೆಪಿ, ಅಸೋಮ್ ಗಣ ಪರಿಷತ್ ಗೆ ಜಯ. ತಲಾ ಒಂದು ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್, ಯುನೈಟೆಡ್ ಲಿಬರಲ್ ಪಾರ್ಟಿ ಲಿಬರಲ್ ಪಕ್ಷಗಳಿಗೆ ಮುನ್ನಡೆ
ಗುಜರಾತ್ | ವಾವ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಗುಲಾಬ್ಸಿಂಗ್ ಪಿರಾಭಾಯ್ ರಜಪೂತ್ ಗೆ ಮುನ್ನಡೆ
ಬಿಹಾರ | ಇಮಾಂಮ್ ಗಂಜ್ ಮೀಸಲು ಕ್ಷೇತ್ರದಲ್ಲಿ ಹಿಂದುಸ್ತಾನಿ ಅವಾಂ ಮೋರ್ಚಾದ ದೀಪಾ ಕುಮಾರಿಗೆ ಜಯ
ಪಶ್ಚಿಮ ಬಂಗಾಳ | 6 ಕ್ಷೇತ್ರಗಳ ಪೈಕಿ 3 ರಲ್ಲಿ ತೃಣಮೂಲ ಕಾಂಗ್ರೆಸ್ ಗೆ ಜಯ. 3 ಕ್ಷೇತ್ರಗಳಲ್ಲಿ ಮುನ್ನಡೆ. ಕ್ಲೀನ್ ಸ್ವೀಪ್ ನತ್ತ ಟಿಎಂಸಿ
ಕೇರಳ | ಪಾಲಕ್ಕಾಡ್ ನಲ್ಲಿ ಕಾಂಗ್ರೆಸ್ ನ ರಾಹುಲ್ ಮಾಂಕೂಟತ್ತಿಲ್ ಗೆ 18,724 ಮತಗಳ ಅಂತರದಿಂದ ಜಯ
ಕೇರಳ | ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿಗೆ 3,57,580 ಮತಗಳ ಅಂತರದಲ್ಲಿ ಭರ್ಜರಿ ಜಯ