ನಟ ತುಕಾಲಿ ಸಂತೋಷ್ ಕಾರು ಅಪಘಾತ: ರಿಕ್ಷಾ ಚಾಲಕ ಮೃತ್ಯು

Update: 2024-03-14 04:38 GMT

ಕುಣಿಗಲ್, ಮಾ.14: ಹಾಸ್ಯನಟ, ಕನ್ನಡ ಬಿಗ್ ಬಾಸ್ ಸ್ಪರ್ಧ ತುಕಾಲಿ ಸಂತೋಷ್ ದಂಪತಿ ಪ್ರಯಾಣಿಸುತ್ತಿದ್ದ ಕಾರು ಮತ್ತು ಆಟೋ ರಿಕ್ಷಾ ನಡುವೆ ಬುಧವಾರ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಕೊತ್ತಗೆರೆ ಹೋಬಳಿ ಕೋಡಹಳ್ಳಿಪಾಳ್ಯ ಗ್ರಾಮದ ವಾಸಿ ಜಗದೀಶ್ (44) ಮೃತಪಟ್ಟವರು.

ಬುಧವಾರ ತುಕಾಲಿ ಸಂತೋಷ್ ಹಾಗೂ ಅವರ ಪತ್ನಿ ತುಮಕೂರಿನಲ್ಲಿ ಸಿನೆಮಾ ಚಿತ್ರೀಕರಣ ಮುಗಿಸಿ ತನ್ನ ಗ್ರಾಮ ಹೊಳೆನರಸೀಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಇವರು ಸಂಚರಿಸುತ್ತಿದ್ದ ಕಾರು ಮತ್ತು ಕುಣಿಗಲ್ ಕಡೆಯಿಂದ ಕೋಡಹಳ್ಳಿಪಾಳ್ಯ ಗ್ರಾಮಕ್ಕೆ ಹೋಗುತ್ತಿದ್ದ ಜಗದೀಶ್ ಅವರ ರಿಕ್ಷಾ ಮಧ್ಯೆ ಢಿಕ್ಕಿಯಾಗಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಜಗದೀಶ್ ರನ್ನು ಕುಣಿಗಲ್ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮುಂಜಾವ ಕೊನೆಯುಸಿರೆಳೆದಿದ್ದಾರೆ.

ಅಪಘಾತದಲ್ಲಿ ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದೆ. ಈ ಬಗ್ಗೆ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News