ಹೊಸಕೋಟೆ | ಸರಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಬೆಂಕಿ ಅವಘಡ: ಅಪಾಯದಿಂದ ಪಾರಾದ 15 ವಿದ್ಯಾರ್ಥಿಗಳು

Update: 2024-03-23 15:02 IST
ಹೊಸಕೋಟೆ | ಸರಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಬೆಂಕಿ ಅವಘಡ: ಅಪಾಯದಿಂದ ಪಾರಾದ 15 ವಿದ್ಯಾರ್ಥಿಗಳು
  • whatsapp icon

ಪಾವಗಡ, ಮಾ.23: ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ತಡರಾತ್ರಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದೆ.

ಕೊಠಡಿಯಲ್ಲಿ 15 ವಿದ್ಯಾರ್ಥಿಗಳು ಮಲಗಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಕೊಠಡಿಯಿಂದ ಹೊರಗೆ ಬಂದು ಪಾರಾಗಿದ್ದಾರೆ.

ವಿದ್ಯಾರ್ಥಿಗಳು ತಮ್ಮ ವಸ್ತು ಪುಸ್ತಕಗಳು ಬಟ್ಟೆ ಇತ್ಯಾದಿಗಳು ಹೊರ ತರುವ ವೇಳೆಗೆ ಬೆಂಕಿಯು ಕೊಠಡಿ ಪೂರ್ತಿ ಆವರಿಸಿ ಮಂಚ ಮತ್ತು ಬೆಡ್, ಬಾಗಿಲು ಕಿಟಕಿಗಳು ಸುಟ್ಟು ನಾಶವಾಗಿವೆ.

ಕೆಲವು ವಿದ್ಯಾರ್ಥಿಗಳ ಬಟ್ಟೆ ಪುಸ್ತಕ ಹೊದಿಕೆಗಳು ಸುಟ್ಟು ಭಸ್ಮವಾಗಿವೆ. ವಿದ್ಯಾರ್ಥಿಗಳು ಸಕಾಲಕ್ಕೆ ಎಚ್ಚೆತ್ತುಕೊಂಡಿದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.

ಈ ಸಂಬಂಧ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಮಲ್ಲಿಕಾರ್ಜುನ್ ವೈ.ಎನ್. ಹೊಸಕೋಟೆ ಠಾಣೆಗೆ ದೂರು ನೀಡಿದ್ದಾರೆ.

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News