ತುಮಕೂರು| ಮಜ್ಜಿಗೆ ಸಿದ್ದಪಡಿಸುವ ಬಾಯ್ಲರ್ ಸ್ಟೋಟ: ಓರ್ವ ಕಾರ್ಮಿಕನಿಗೆ ಗಂಭೀರ ಗಾಯ

Update: 2024-07-09 12:17 GMT

ತುಮಕೂರು: ಡೈರಿ ಮಜ್ಜಿಗೆ ಸಿದ್ದಪಡಿಸುವ ಬಾಯ್ಲರ್ ಸ್ಟೋಟಗೊಂಡ ಪರಿಣಾಮ ಓರ್ವ ಕಾರ್ಮಿಕ ಗಂಬೀರವಾಗಿ ಗಾಯಗೊಂಡ ಘಟನೆ ಕೊರಟಗೆರೆ ತಾಲೂಕು ಮಲ್ಲೆಕಾವು ಗ್ರಾಮದಲ್ಲಿ ನಡೆದಿದೆ.

ಶ್ರೀಕಂಠೇಶ್ವರ ಡೈರಿ ಅಡಿಯಲ್ಲಿ ಪುಣ್ಯಕೋಟಿ ಹೆಸರಿನ ಮಜ್ಜಿಗೆ ತಯಾರಿಕಾ ಘಟಕ ಕೊರಟಗೆರೆ ತಾಲೂಕು ಮಲ್ಲೇಕಾವು ಗ್ರಾಮದಲ್ಲಿ ನಡೆಯುತ್ತಿದ್ದು, ತಡರಾತ್ರಿ ಬಾಯ್ಲರ್ ಸ್ಟೋಟಗೊಂಡಿದೆ.ಸ್ಟೋಟದ ತೀವ್ರತೆಗೆ ಬಾಯ್ಲರ್ ಕಟ್ಟಡದಲ್ಲಿದ್ದ ನೂರಾರು ಹಾಲಿನ ಕ್ಯಾನ್ ಮತ್ತಿತರರ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದು, ಗೋಡೆ ಬಿರುಕು ಬಿಟ್ಟಿದೆ. ಸುಮಾರು 3 ಕಿ.ಮಿ.ಗೂ ಹೆಚ್ಚು ದೂರಕ್ಕೆ ಸ್ಟೋಟದ ಶಬ್ದ ಕೇಳಿ ಬಂದಿದ್ದು, ನಿದ್ರೆಯಲ್ಲಿದ್ದ ಜನರು ಬೆಚ್ಚಿಬಿದ್ದಿದ್ದಾರೆ.

ಬಾಯ್ಲರ್ ಸ್ಟೋಟದಿಂದ ಮಲ್ಲೇಕಾವು ಗ್ರಾಮದ ಯತೀಶ್(23) ಕಾರ್ಮಿಕ ತೀವ್ರವಾಗಿ ಗಾಯಗೊಂಡು, ತುಮಕೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News