ತುಮಕೂರು | ಜೂಜಾಟದಲ್ಲಿ ತೊಡಗಿದ್ದ 14 ಮಂದಿಯ ಬಂಧನ : 11 ಲಕ್ಷ ರೂ. ವಶ

Update: 2024-07-10 10:34 GMT

   ಸಾಂದರ್ಭಿಕ ಚಿತ್ರ (PC : Meta AI)

ತುಮಕೂರು : ಅಕ್ರಮ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿರುವ ತುಮಕೂರು ಸಿ.ಇ.ಎನ್.ಪೊಲೀಸರು ಜೂಜಾಟದಲ್ಲಿ ತೊಡಗಿದ್ದ 14 ಜನರನ್ನು ಬಂಧಿಸಿ, 11,42,590 ರೂ. ನಗದು 17 ಮೊಬೈಲ್ ಫೋನ್ ಹಾಗೂ 3 ಕಾರುಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.

ಹೆಬ್ಬೂರು ಪೊಲೀಸ್ ಠಾಣೆಯ ಗೂಳೂರಿನ ಅರೇಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ತಮವಾಗಿ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಸಿ.ಇ.ಎನ್ ಠಾಣೆ ಪೊಲೀಸರು ಮಂಗಳವಾರ ಮದ್ಯರಾತ್ರಿ ದಾಳಿ ನಡೆಸಿದ್ದರು. ಜೂಜಾಟದಲ್ಲಿ ತೊಡಗಿದ್ದ ಪ್ರಸನ್ನಕುಮಾರ್, ಈಶ್ವರ, ನಾಗರಾಜಪ್ಪ, ಪರಮೇಶ, ಜಯಶೀಲ, ಮಂಜುನಾಥ, ನಟರಾಜು, ಬಸವರಾಜು, ಯಶವಂತ, ಸೋಮಶೇಖರಯ್ಯ, ಯತೀಶ, ಬಸವರಾಜು, ತಿರುಮಲಯ್ಯ, ಸಿದ್ದೇಗೌಡ ಎಂಬವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಿ.ಇ.ಎನ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಾಮಕೃಷ್ಣಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ದ್ವಾರಕೀಶ್, ನಟರಾಜು, ರಾಜ್ ಕುಮಾರ್, ಸೈಮನ್ ವಿಕ್ಟರ್, ಮಾರುತೀಶ್, ರವಿ ಕುಮಾರ ರೆಡ್ಡಿ, ಶಿವಕುಮಾರ್ ಲಮಾಣಿ, ಹರೀಶ್, ಅನಿಲ್‍ಕುಮಾರ್, ಕೆ.ಟಿ ನಾರಾಯಣ ಅವರು ಭಾಗಿಯಾಗಿದ್ದರು. ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳ ತಂಡವನ್ನು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ. ರವರು ಪ್ರಶಂಸಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News