ತುಮಕೂರು ಲೋಕಸಭಾ ಕ್ಷೇತ್ರ | 18 ಮಂದಿ ಕಣದಲ್ಲಿ : 4 ನಾಮಪತ್ರ ವಾಪಸ್
ತುಮಕೂರು : ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆಗೆ ಸ್ಪರ್ಧಿಸಿದ್ದ ವಿ.ಪ್ರಭಾಕರ್,ಹನುಮಯ್ಯ ಎನ್., ಕೆ. ಹುಚ್ಚೇಗೌಡ ಹಾಗೂ ಡಿ.ಎಂ.ಅನಂತರಾಜು ಸೇರಿ 4 ನಾಮನಿರ್ದೇಶಿತ ಪಕ್ಷೇತರ ಅಭ್ಯರ್ಥಿಗಳು ಉಮೇದುವಾರಿಕೆಯನ್ನು ಹಿಂಪಡೆಯುವ ಮೂಲಕ ಅಂತಿಮವಾಗಿ ಕಣದಲ್ಲಿ 18 ಜನ ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಒಟ್ಟು 22 ನಾಮನಿರ್ದೇಶಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ನಿಗಧಿಯಾಗಿದ್ದ ಏಪ್ರಿಲ್ 8ರಂದು 4 ಪಕ್ಷೇತರ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ. ಚುನಾವಣೆಯ ಅಂತಿಮ ಕಣದಲ್ಲಿ 18 ಅಭ್ಯರ್ಥಿಗಳು ಉಳಿದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ, ಬಹುಜನ ಸಮಾಜ ಪಕ್ಷದ ರಾಜಸಿಂಹ ಜೆ.ಎನ್., ಭಾರತೀಯ ಜನತಾ ಪಕ್ಷದ ವಿ.ಸೋಮಣ್ಣ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್) ಪಕ್ಷದ ಎಸ್.ಎನ್.ಸ್ವಾಮಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರದೀಪ್ ಕುಮಾರ್ ದೊಡ್ಡ ಮುದ್ದೇಗೌಡ, ನ್ಯಾಷನಲ್ ಮಹಾಸಭಾ ಪಕ್ಷದ ಬಸವರಾಜು ಎಚ್.ಆರ್., ಕನ್ನಡ ಪಕ್ಷದ ಡಾ.ಎಚ್.ಬಿ.ಎಂ. ಹಿರೇಮಠ್, ಪಕ್ಷೇತರ ಅಭ್ಯರ್ಥಿಗಳಾದ ಕಪನಿ ಗೌಡ, ಬಿ. ದೇವರಾಜು, ಆರ್. ನಾರಾಯಣಪ್ಪ,ನೀಲಕಂಠೇಶ ಹೆಚ್.ಎಸ್.,ಆರ್. ಪುಷ್ಪ, ಪ್ರಕಾಶ್ ಆರ್.ಎ.ಜೈನ್,ಮಲ್ಲಿಕಾರ್ಜುನಯ್ಯ, ಎಚ್.ಎಲ್.ಮೋಹನ್ ಕುಮಾರ್, ರಂಗನಾಥ ಆರ್.ಎಸ್., ಜೆಕೆ ಸಮಿ, ಸಿದ್ದರಾಮೇಗೌಡ ಟಿ.ಬಿ. ಸೇರಿ 18 ಅಭ್ಯರ್ಥಿಗಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.