ತುಮಕೂರು | ಮಗನಿಂದ ತಂದೆಯ ಕೊಲೆ

Update: 2024-08-14 06:40 GMT

ಸಾಂದರ್ಭಿಕ ಚಿತ್ರ

ತುಮಕೂರು, ಆ.14: ಆಸ್ತಿ ವಿಚಾರದ ವೈಮನಸ್ಸು ಕಾರಣ ಮಗನೇ ತಂದೆಯನ್ನು ಕೊಲೆಗೈದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನಡೆದಿದೆ.

ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದ ವೆಂಕಟಪ್ಪ(75) ಕೊಲೆಯಾದವರು. ಅವರ ಪುತ್ರ ಸಿದ್ದಪ್ಪ(45) ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ವೆಂಕಟಪ್ಪ ಮೂರೂವರೆ ಎಕರೆ ಜಮೀನು ಹೊಂದಿದ್ದರು. ಇತ್ತೀಚೆಗೆ ಈ ಜಮೀನಲ್ಲಿ ಒಂದಿಷ್ಟು ಮಾರಾಟ ಮಾಡಿದ್ದು, ಅದರಿಂದ ಲಭಿಸಿದ ಹಣದಲ್ಲಿ 25 ಲಕ್ಷ ರೂ. ಮಗಳಿಗೆ ನೀಡಿದ್ದರು. ಅಲ್ಲದೆ ಉಳಿದ ಜಮೀನನನ್ನು ಮಗಳ ಹೆಸರಿಗೆ ಬರೆದುಕೊಟ್ಟಿದ್ದರೆನ್ನಲಾಗಿದೆ. ಇದಕ್ಕೆ ಸಿದ್ದಪ್ಪ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಈ ವಿಚಾರವಾಗಿ ತಂದೆ-ಮಗನ ನಡುವೆ ಹಲವು ಬಾರಿ ಗಲಾಟೆ ನಡೆದಿದ್ದು, ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಲವು ಬಾರಿ ನ್ಯಾಯ ಪಂಚಾಯಿತಿ ಕೂಡ ನಡೆದಿತ್ತು ಎಂದು ತಿಳಿದುಬಂದಿದೆ.

ನ್ಯಾಯ ಪಂಚಾಯಿತಿ ಮಾಡಿದರೂ ವೆಂಕಟಪ್ಪ ಮಗನಿಗೆ ಆಸ್ತಿ, ಹಣ ನೀಡಲು ತಂದೆ ಹಿಂದೇಟು ಹಾಕಿದ್ದರು. ಇದರಿಂದ ಸಿದ್ದಪ್ಪ ತನ್ನ ತಂದೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ನಡುವೆ ಆರೋಪಿ ಸಿದ್ದಪ್ಪ ತಲೆಮರೆಸಿಕೊಂಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಕೋಳಾಲ ಠಾಣಾ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News