ಬಗರ್ ಹುಕುಂ ಸಮಿತಿ ಸಭೆ: 18 ಕಡತಗಳ ಮಂಜೂರಾತಿ

Update: 2025-01-16 15:03 GMT

ಬೈಂದೂರು, ಜ.16: ಬೈಂದೂರು ತಾಲ್ಲೂಕು ಕಚೇರಿಯಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಇಂದು ಬಗರ್ ಹುಕುಂ ಅಕ್ರಮ ಸಕ್ರಮ ಸಭೆ ನಡೆಸಿ, ಸಾಗುವಳಿ ಚೀಟಿ ಮಂಜೂರಾತಿ ಮಾಡಿದರು.

ಸಭೆಯಲ್ಲಿ ಅಕ್ರಮ ಸಕ್ರಮಕ್ಕೆ ಸಂಬಂಧಿಸಿದಂತೆ ಹಳ್ಳಿಹೊಳೆ ಗ್ರಾಮದ 6 ಕಡತ, ಜಡ್ಕಲ್ ಗ್ರಾಮದ 6 ಕಡತ, ಮುದೂರು ಗ್ರಾಮದ 5 ಕಡತ ಹಾಗೂ ನಾಡ ಗ್ರಾಮದ 1 ಕಡತ ಸೇರಿ ಒಟ್ಟು 18 ಕಡತಗಳನ್ನು ಸಮಿತಿ ಸಭೆಯ ಮುಂದಿಟ್ಟು ಎಲ್ಲಾ ಕಡತಗಳನ್ನು ಮಂಜೂರಾತಿ ನೀಡಿ ಮುಂದಿನ ಹಂತದ ಕ್ರಮಕ್ಕೆ ಶಾಸಕರು ಕಳುಹಿಸಿದರು.

ಸಭೆಯಲ್ಲಿ ಮಾತನಾಡಿದ ಶಾಸಕರು, ಇಂದಿನ ಸಭೆಯಲ್ಲಿ ಬೈಂದೂರಿನ 4 ಗ್ರಾಮಗಳ ಅರ್ಹ 18 ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮಂಜೂರು ಮಾಡಲಾಗಿದೆ. ಉಳಿದಂತೆ ಅತೀ ಶೀಘ್ರದಲ್ಲಿ ಪ್ರತಿ ವಾರ ಬಗರ್ ಹುಕುಂ ಸಮಿತಿ ಸಭೆ ಗಳನ್ನು ನಡೆಸಿ ಎಲ್ಲಾ ಸಾಗುವಳಿದಾರರಿಗೆ ಭೂಮಿ ಹಕ್ಕುಪತ್ರ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಬೈಂದೂರು ಬಗರ್ ಹುಕುಂ ಸಮಿತಿ ಸದಸ್ಯರಾದ ಪ್ರದೀಪ್ ಶೆಟ್ಟಿ, ಅನಂತ ಮೊವಾಡಿ, ಸಮಿತಿ ಕಾರ್ಯದರ್ಶಿ ಹಾಗೂ ತಾಲೂಕು ತಹಸೀಲ್ದಾರ್ ಭೀಮ್ ಸೇನ್ ಕುಲಕರ್ಣಿ, ಉಪ ತಹಸೀಲಾರ್ ಲತಾ, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News