ಅವಿಭಜಿತ ದ.ಕ. ಜಿಲ್ಲೆಯ ಒಟ್ಟ 22 ಗ್ರಾಪಂಗಳಿಗೆ ಕಾರಂತ ಪುರಸ್ಕಾರ
ಕೋಟ, ನ.7: ಕೋಟತಟ್ಟು ಗ್ರಾಮಪಂಚಾಯತ್ ಕೊಡ ಮಾಡುವೆ ಕಾರಂತ ಪುರಸ್ಕಾರಕ್ಕೆ ಉಡುಪಿ ಜಿಲ್ಲೆಯ 10 ಮತ್ತು ದ.ಕ. ಜಿಲ್ಲೆಯ 12 ಸೇರಿದಂತೆ ಒಟ್ಟು 22 ಗ್ರಾಮ ಪಂಚಾಯತ್‌ಗಳು ಆಯ್ಕೆಯಾಗಿವೆ.
ಈ ಪುರಸ್ಕಾರವನ್ನು ನ.10ರಂದು ಕೋಟದ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆಯುವ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೇಘಾಲಯದ ರಾಜ್ಯಪಾಲ ವಿಜಯಶಂಕರ್ ಪ್ರದಾನ ಮಾಡಲಿದ್ದಾರೆ. ಘನತ್ಯಾಜ್ಯ ವಿಲೇವಾರಿ, ಸಮಗ್ರ ಆಡಳಿತ, ಮನರೇಗಾ ಯೋಜನೆ, ತೆರಿಗೆ ಸಂಗ್ರಹಣೆ ಮತ್ತು ಸ್ಮಶಾನ ಅಭಿವೃದ್ಧಿ ಸೇರಿದಂತೆ ವಿವಿಧ ಮಾನದಂಡಗಳ ಆಧಾರದ ಮೇಲೆ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಉಡುಪಿ ಜಿಲ್ಲೆಯ 80 ಬಡಗಬೆಟ್ಟು, ಬಡಾ, ಕಾಡೂರು, ತಲ್ಲೂರು, ನಾಡಾ, ಪಳ್ಳಿ, ಮುದ್ರಾಡಿ, ಹಕ್ಲಾಡಿ, ಕುತ್ಯಾರು, ಪಳ್ಳಿ, ಎಲ್ಲೂರು ಹಾಗೂ ದ.ಕ ಜಿಲ್ಲೆಯ ನೀರುಮಾರ್ಗ, ಪಡುಮಾರ್ನಾಡು, ಕಡೇಶ್ವಾಲ್ಯ, ಕೋಡಿಂಬಾಡಿ, ಅಲಂಕಾರು, ಕಾಶೀಪಟ್ನ, ಕಳಂಜ, ಕೆಮ್ರಾಲ್, ಬಾಳೆಪುಣಿ, ಶಿರಾಡಿ, ಆರ್ಯಾಪ್ಪು, ಉಬರಡ್ಕ ಮಿತ್ತೂರು ಗ್ರಾಪಂಗಳು ಆಯ್ಕೆಯಾಗಿವೆ.
ಇದರಲ್ಲಿ ಉಡುಪಿ ಜಿಲ್ಲೆಯ ಪಳ್ಳಿ ಮತ್ತು ದ.ಕ ಜಿಲ್ಲೆಯ ಕಡೆಶ್ವಾಲ್ಯ ಗ್ರಾಮಗಳು ಗಾಂಧಿ ಗ್ರಾಮಪುರಸ್ಕಾರದ ಜೊತೆಗೆ ಸಮಗ್ರ ಆಡಳಿತ ಮತ್ತು ಘನತ್ಯಾಜ್ಯ ವಿಲೇವಾರಿಯಲ್ಲಿ ತೋರಿದ ಸಾಧನೆಗೆ ಪುರಸ್ಕಾರ ಸ್ವೀಕರಿಸಲಿದೆ ಎಂದು ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.