ಮಾನಸಿಕ ಖಿನ್ನೆತಿಯಿಂದ ಶಿಕ್ಷಕಿ ಆತ್ಮಹತ್ಯೆ
Update: 2024-11-07 16:30 GMT
ಕಾರ್ಕಳ : ಮಾನಸಿಕ ಖಿನ್ನೆತೆಯಿಂದ ಅತಿಥಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.6ರಂದು ಬೆಳಗ್ಗೆ ಈದು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮೂಡಬಿದ್ರೆ ಮೂಲದ ಈದು ಗ್ರಾಮದ ರಾಜೇಶ್ ಎಂಬವರ ಪತ್ನಿ ಪ್ರಸನ್ನ(29) ಎಂದು ಗುರುತಿಸಲಾಗಿದೆ. ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಥಿತಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದ ಇವರಿಗೆ 10 ತಿಂಗಳ ಹೆಣ್ಣು ಮಗು ಇದ್ದು, ರಾಜೇಶ್ ಬೆಂಗಳೂರಿನ ಕಂಪನಿಯಲ್ಲಿ ಉದ್ಯೋಗಿ ಯಾಗಿದ್ದಾರೆ.
ಕಷ್ಟಪಟ್ಟು ಓದಿದ್ದರೂ ಬೇಗನೇ ಮಗು ಆದ ಕಾರಣ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪ್ರಸನ್ನ, ಮನೆಯ ಡೈನಿಂಗ್ ಹಾಲ್‌ನಿಂದ ಮಾಹಡಿಗೆ ಹೋಗುವ ಮೆಟ್ಟಿಲಿನ ಸ್ಟೀಲ್ ರಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.