ಮುನಿಯಾಲ್ ಅಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ ಎ ಗ್ರೇಡ್

Update: 2024-11-07 16:07 GMT

ಉಡುಪಿ: ಭಾರತೀಯ ಚಿಕಿತ್ಸಾ ಪದ್ಧತಿಯ ರಾಷ್ಟ್ರೀಯ ಆಯೋಗ (ನ್ಯಾಷನಲ್ ಕಮಿಷನ್ ಫಾರ್ ಇಂಡಿಯನ್ ಸಿಸ್ಟಂ ಆಫ್ ಮೆಡಿಸಿನ್) ನಡೆಸಿದ ಭಾರತೀಯ ಗುಣಮಟ್ಟ ಪರಿಷದ್ (ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ) ಮೌಲ್ಯಾಂಕನದಲ್ಲಿ ಮಣಿಪಾಲದ ಮುನಿಯಾಲ್ ಆಯುರ್ವೇದ ಕಾಲೇಜು ರಾಷ್ಟ್ರಮಟ್ಟದಲ್ಲಿ ‘ಎ’ ಗ್ರೇಡ್ ಪಡೆದಿದೆ.

ಈ ಮೌಲ್ಯಾಂಕನವು ಶೈಕ್ಷಣಿಕ ಗುಣಮಟ್ಟ, ಶಿಕ್ಷಕರ ಕ್ಷಮತೆ, ವಿದ್ಯಾರ್ಥಿಗಳ ಕಾರ್ಯ ಕ್ಷಮತೆ, ಸಂಶೋಧನೆ ಹಾಗೂ ಉತ್ಕೃಷ್ಟ ಗ್ರಂಥ ಪ್ರಕಟಣೆಗಳು ಅಲ್ಲದೇ ಅಳವಡಿಸಿಕೊಂಡ ನೂತನ ಕಲಿಕಾ ವಿಧಾನಗಳ ಮಾನದಂಡಗಳ ಆಧಾರದ ಮೇಲೆ ನಡೆಯುತ್ತದೆ.

ಸಂಸ್ಥೆಯ ವಿನೂತನ ಔಷಧಿಗಳ ಆವಿಷ್ಕಾರ ಹಾಗೂ ಆ ಸಂಶೋಧನೆಗಳ ರಕ್ಷಣೆಗೆ ದೊರೆತ 20 ವರ್ಷಗಳ 17 ಅಮೇರಿಕಾದ ಪೇಟೆಂಟ್‌ಗಳು ಸಂಸ್ಥೆಯ ರಾಷ್ಟ್ರಮಟ್ಟದ ಪ್ರಗತಿಗೆ ತನ್ನ ಕೊಡುಗೆ ನೀಡಿದೆ. ದೇಶದಲ್ಲಿರುವ 500ಕ್ಕೂ ಹೆಚ್ಚಿನ ಆಯುರ್ವೇದ ಕಾಲೇಜುಗಳ ನಡುವೆ ಮೊದಲ ಹಂತದ ಮೌಲ್ಯಾಂಕನದಲ್ಲಿಯೇ ಉನ್ನತ ಎ ಗ್ರೇಡ್ ಪಡೆದಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ದೊರೆತ ಮನ್ನಣೆಯಾಗಿದೆ ಎಂದು ಕಳೆದ 80 ವರ್ಷಗಳಿಂದ ಆಯುರ್ವೇದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯ ಅಧ್ಯಕ್ಷ ಡಾ.ಎಂ.ವಿಜಯಭಾನು ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News