ಉಡುಪಿ: ಡಿ.27ರಂದು ಸಿಎ ವಿದ್ಯಾರ್ಥಿಗಳ ಮೆಗಾ ಸಮಾವೇಶ

Update: 2024-12-26 15:37 GMT

ಉಡುಪಿ, ಡಿ.26: ಭಾರತದ ಲೆಕ್ಕಪರಿಶೋಧಕರ ಸಂಸ್ಥೆಯ (ಐಸಿಎಐ) ಉಡುಪಿ ಜಿಲ್ಲಾ ಶಾಖೆ (ಎಸ್‌ಐಆರ್‌ಸಿ) ಸಿಎ ವಿದ್ಯಾರ್ಥಿಗಳಿಗಾಗಿ ಮೆಗಾ ಸಮ್ಮೇಳನವನ್ನು ನಾಳೆ ಡಿ.27 ಮತ್ತು 28ರಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟಟಿ ಸ್ಮಾರಕ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಸಮ್ಮೇಳನದ ಸಂಘಟನಾ ಸಮಿತಿಯ ಅಧ್ಯಕ್ಷ ಸಿಎ ಕಿರಣ್ ಕುಮಾರ್ ಎಚ್. ತಿಳಿಸಿದ್ದಾರೆ.

ದಕ್ಷಿಣ ಭಾರತ ವ್ಯಾಪ್ತಿಯ ವಿವಿಧ ಶಾಖೆಗಳ 600ಕ್ಕೂ ಅಧಿಕ ಸಿಎ ವಿದ್ಯಾರ್ಥಿಗಳು ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳನದಲ್ಲಿ ಸಿಎ ಹೊಸ ಪಠ್ಯಕ್ರಮದ ಕುರಿತು ಚರ್ಚೆ ನಡೆಯಲಿದೆ ಎಂದ ಅವರು, ಎರಡು ದಿನಗಳಲ್ಲಿ ತೆರಿಗೆ ಕ್ರಮ, ಜಿಎಸ್‌ಟಿ, ಲೆಕ್ಕ ಪರಿಶೋಧನೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಬಳಕೆ, ಲೆಕ್ಕಪರಿಶೋಧನೆ (ಅಡಿಟಿಂಗ್) ಕುರಿತು ವ್ಯಾಪಕ ಚರ್ಚೆ ನಡೆಯಲಿದೆ ಎಂದರು.

ಸಮ್ಮೇಳನದಲ್ಲಿ ಖ್ಯಾತ ಸಿಎಗಳಾದ ಗೋಪಾಲಕೃಷ್ಣ ರಾಜು, ಪಟ್ಟಾಭಿರಾಮ ಹಾಗೂ ಶಿರಿಷ್ ವ್ಯಾಸ್ ಮುಂತಾದವರು ಪ್ರಮುಖ ಭಾಷಣಕಾರರಾಗಿ ರುವರು. ನಾಳೆ ಬೆಳಗ್ಗೆ 10ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಐಸಿಎಐನ ಉಪಾಧ್ಯಕ್ಷ ಚರಣ್‌ಜ್ಯೋತ್ ಸಿಂಗ್ ನಂದಾ ಭಾಗವಹಿಸುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಅರ್ಚನಾ ಮಯ್ಯ, ಕಾರ್ಯದರ್ಶಿ ಎಂ.ರಾಘವೇಂದ್ರ ಮೊಗೇರಾಯ, ಖಜಾಂಚಿ ಅಶ್ವಥ್ ಜೆ. ಶೆಟ್ಟಿ ಹಾಗೂ ಸಿಕಾಸ್ ಅಧ್ಯಕ್ಷ ಕೆ. ಲಕ್ಷ್ಮೀಶ್ ರಾವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News