ಎನ್‌ಸಿಸಿ ಕೆಡೆಟ್‌ಗಳಿಗೆ ಸಾಫ್ಟ್‌ಸ್ಕಿಲ್ ಡೆವಲಪ್‌ಮೆಂಟ್ ತರಬೇತಿ

Update: 2024-12-26 14:30 GMT

ಉಡುಪಿ: ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯ ಆಯ್ದ ಎನ್‌ಸಿಸಿ ಕೆಡೆಟ್‌ಗಳಲ್ಲಿ ಉದ್ಯಮಶೀಲತೆ ಮತ್ತು ಸ್ಟಾರ್ಟ್‌ಅಪ್ ಕೌಶಲ್ಯಗಳನ್ನು ವೃದ್ಧಿಸಲು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಎನ್‌ಸಿಸಿ ಎಕ್ಸ್‌ಚೇಂಜ್ ಆಫ್ ಪಾರ್ಟಿಸಿಪೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಮಣಿಪಾಲ ಕೌಶಲ್ಯಾಭಿವೃದ್ಧಿ ಕೇಂದ್ರ ಗಳ ಸಹಯೋಗದಲ್ಲಿ ಸಾಫ್ಟ್‌ಸ್ಕಿಲ್ ಡೆವಲಪ್‌ಮೆಂಟ್ ತರಬೇತಿ ಕಾರ್ಯಕ್ರಮ ಗುರುವಾರ ಮಣಿಪಾಲದ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಪ್ರಾರಂಭಗೊಂಡಿತು.

ಈ ಸಂದರ್ಭದಲ್ಲಿ ನಿವೃತ್ತ ಬ್ರಿಗೇಡಿಯರ್, ಎಂಐಟಿಯ ನಿವೃತ್ತ ನಿರ್ದೇಶಕ ಹಾಗೂ ಎಂಎಸ್‌ಡಿಸಿ ಚೇರ್‌ಮ್ಯಾನ್ ಸುರ್ಜಿತ್ ಸಿಂಗ್ ಪಾಬ್ಲಾ ಮಾತನಾಡಿ, ಎನ್‌ಸಿಸಿ ವಿದ್ಯಾರ್ಥಿಗಳು ಎನ್‌ಸಿಸಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ಅದರ ಉದ್ದೇಶ ಹಾಗೂ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಎನ್‌ಸಿಸಿ ಕೆಡೆಟ್‌ಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು, ಶಿಸ್ತು ಮತ್ತು ಧೈರ್ಯವನ್ನು ರೂಪಿಸಲು ಈ ತರಬೇತಿ ನೆರವಾಗುತ್ತದೆ. ಕೌಶಲ್ಯಾಭಿವೃದ್ಧಿ ತರಬೇತಿ ಸೇರಿದಂತೆ ಇಲ್ಲಿ ಕಲಿತ ವಿಷಯಗಳು ತಮ್ಮ ಮುಂದಿನ ಜೀವನವನ್ನು ಯಶಸ್ವಿಗೊಳಿಸಲು ನೆರವಾಗುತ್ತದೆ. ಇದರ ಜೊತೆಗೆ ದೇಶದ ಆಂತರಿಕ ಭದ್ರತೆಯಲ್ಲಿ ಪಾಲ್ಗೊಳ್ಳಲು ಸಹ ಇದು ಸಹಕಾರಿ ಯಾಗುತ್ತದೆ ಎಂದರು.

ಮುಂದಿನ ಡಿ.30ರವರೆಗೆ ಎಂಐಟಿಯಲ್ಲಿ ನಡೆಯುವ ಈ ತರಬೇತಿ ಶಿಬಿರದಲ್ಲಿ ಎನ್‌ಸಿಸಿ ಕೆಡೆಟ್‌ಗಳು ಸಮಯವನ್ನು ವ್ಯರ್ಥಮಾಡದೇ, ಶಿಬಿರ ದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಕುರಿತಂತೆ ತರಬೇತಿಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ.ಅಂಜಯ್ ಡಿ, ಡಾ. ಮೊಹಮ್ಮದ್ ಝುಬೇರ್, ಡಾ. ಸುಚೇತಾ ಕೊಲೆಕಾರ್, ಕರ್ನಾಟಕ ಮತ್ತು ಗೋವಾದ ಎನ್‌ಸಿಸಿ ಕೆಡೆಟ್‌ಗಳು ಉಪಸ್ಥಿತರಿದ್ದರು.

ಕಮಾಂಡಿಂಗ್ ಆಫೀಸರ್ ಕ. ರಾಹುಲ್ ಚೌಹಾಣ್ ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿ, ಎನ್‌ಸಿಸಿ ಕೆಡೆಟ್‌ಗಳಿಗೆ ಎನ್‌ಸಿಸಿಯಲ್ಲಿ ಉತ್ತಮ ತರಬೇತಿ ನೀಡುವುದರ ಜೊತೆಗೆ ಸ್ಟಾರ್ಟ್‌ಅಪ್ ಮತ್ತು ಉದ್ಯಮಶೀಲತಾ ಕೌಶಲ್ಯ ಗಳನ್ನು ಹೆಚ್ಚಿಸುವುದು ಎನ್‌ಸಿಸಿ ಬದ್ಧತೆಯ ಪ್ರಮುಖ ಧ್ಯೇಯವಾಗಿದೆ ಎಂದರು.

ಡಿಸೆಂಬರ್ 21ರಿಂದ 30ರವರೆಗೆ 21 ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಗೆ ಮಣಿಪಾಲ್ ಎಂಐಟಿಯಲ್ಲಿ 10 ದಿನಗಳ ಶಿಬಿರ ನಡೆಯಲಿದೆ. 441 ಎನ್‌ಸಿಸಿ ಕೆಡೆಟ್‌ಗಳ ಸಂಯೋಜಿತ ಶಿಬಿರವನ್ನು ಆಯೋಜಿಸಲಾ ಗುವುದು. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಚಟುವಟಿಕೆಗಳ ಬಗ್ಗೆ ಆಯ್ಕೆಯಾದ 80 ಕೆಡೆಟ್ಸ್‌ಗಳಿಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ವಿಷಯತಜ್ಞರು ಮತ್ತು ಗಣ್ಯರಿಂದ ಉಪನ್ಯಾಸ, ಪ್ರದರ್ಶನಗಳು ಮತ್ತು ಸಂವಾದಗಳು ನಡೆಯಲಿವೆ.






 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News