ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧಾಕೂಟ: ಉಡುಪಿ ತಂಡಕ್ಕೆ 49 ಪದಕ

Update: 2024-10-30 14:42 GMT

ಉಡುಪಿ: ಗೊಜು ರಿಯೊ ಕರಾಟೆ ಡು ಕೆನ್ ರಿಯೋ ಕಾನ್ ಟ್ರಸ್ಟ್ ಇಂಡಿಯಾ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಕರಾಟೆ ಅಂತಾರಾಷ್ಟ್ರೀಯ ಸ್ಪರ್ಧಾ ಕೂಟದಲ್ಲಿ ಜಪಾನ್ ಶೊಟೊಕಾನ್ ಕರಾಟೆ ಡು ಕನ್ನಿಂಜುಕು ಆರ್ಗನೈಸೇಷನ್ ಇಂಡಿಯಾ ಇದರ ಉಡುಪಿ ತಂಡವು 5 ಚಿನ್ನ, 10 ಬೆಳ್ಳಿ, 34 ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಚಂದ್ರನಗರ ಕ್ರೆಸೆಂಟ್ ಇಂಟರ್ ನ್ಯಾಶನಲ್ ಸ್ಕೂಲ್‌ನ ಮುಹಮ್ಮದ್ ಹುಸೈಫ್, ಆಯಿಷಾ ಸನ್ವಾ, ಮುಹಮ್ಮದ್ ಶಂಶುದ್ದೀನ್, ಮುಹಮ್ಮದ್ ಶಮೀಲ್, ಮುಹಮ್ಮದ್ ಅದ್ನಾನ್, ಅಯ್ಮನ್ ಅಹ್ಮದ್, ಅಜಾ ಆಸೀಫ್ ಮುಹಮ್ಮದ್, ಮುಹಮ್ಮದ್ ಶುಹಾಮ್, ಮುಹಮ್ಮದ್ ಅನಾನ್, ಮುಹಮ್ಮದ್ ಹಫೀಲ್, ಮುಹಮ್ಮದ್ ಝೈಮ್, ಅಬ್ದುಲ್ ಅಯ್ಮನ್ ಇಮ್ರಾನ್, ಮುಹಮ್ಮದ್ ತಫಜ್ಜಲ್, ಶೇಕ್ ಇಜಾನ್ ಅಹ್ಮದ್, ಮುಹಮ್ಮದ್ ಆರೀಜ್, ಕಟಪಾಡಿ ಎಸ್‌ವಿಎಸ್ ಆಂಗ್ಲ ಮಾಧ್ಯಮ ಶಾಲೆಯ ಹಂಶಲ್ ಡಿ ಕುಮಾರ್, ಚಿರಾಗ್ ಎನ್.ಮೆಂಡನ್, ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯ ಫಾಕಿಮ್ ಸದ್ಧಾಪ್, ಮುಹಮ್ಮದ್ ಸುಫಿಯಾನ್, ಮುಹಮ್ಮದ್ ಶಾನ್ ಹನೀಫ್, ಕೋಡಿ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್‌ನ ಅಬ್ದುಲ್ ಮುಹಾಜ್, ಅನುಷ್ಕ ಎಸ್., ಮುಹಮ್ಮದ್ ಶಮ್ರಾಜ್ ಸೈಫುಲ್ಲಾ, ಸಾತಿ ಪಾತ್ರ, ಉಚ್ಚಿಲ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಮುಹಮ್ಮದ್ ಆಹಿಲ್, ಮುಹಮ್ಮದ್ ಶಾಜ್, ಮುಹಮ್ಮದ್ ಫರ್ದೀನ್ ಶಾ, ಐಟಿಐ ವಿದ್ಯಾರ್ಥಿ ಮುಹಮ್ಮದ್ ಸಿಮಕ್ ಹುಸೈನ್, ಶಿರ್ವ ಫೈಝುಲ್ ಆಂಗ್ಲ ಮಾಧ್ಯಮ ಶಾಲೆಯ ಎಂ.ಆಯ್ಮನ್ ಅಬ್ದುಲ್ ಖಾದರ್, ಮೂಳೂರು ಸಿಎಸ್‌ಐ ಯುನಿಟಿ ಆಂಗ್ಲ ಮಾಧ್ಯಮ ಶಾಲೆಯ ಮುಹಮ್ಮದ್ ಹಸನ್ ಜಿಯಾನ್ ಪದಕ ಗಳನ್ನು ಗೆದ್ದು ಕೊಂಡಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯ ಮುಖ್ಯ ಶಿಕ್ಷಕ ಮತ್ತು ಪರೀಕ್ಷಕರಾದ ಶಂಶುದ್ದೀನ್ ಎಚ್.ಶೇಕ್ ಕಾಪು ತರಬೇತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News