ಪ್ರೊ.ಮೆಲ್ವಿನ್ ಡಿಸೋಜಗೆ ಡಾಕ್ಟರೇಟ್ ಪದವಿ

Update: 2025-01-02 14:44 GMT

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಪ್ರೊ.ಮೆಲ್ವಿನ್ ಡಿಸೋಜ ಅವರು ಮಂಡಿಸಿದ ‘ಡೀಪ್ ಲರ್ನಿಂಗ್ ಆಧಾರಿತ ವಿಧಾನದಿಂದ, ಥರ್ಮಲ್ ಚಿತ್ರಗಳನ್ನು ಬಳಸಿ ಆರಂಭಿಕ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವಿಕೆ’ ವಿಷಯ ಕುರಿತ ಸಂಶೋಧನಾ ಮಹಾಪ್ರಬಂಧಕ್ಕೆ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿದೆ.

ಪ್ರೊ.ಮೆಲ್ವಿನ್ ಅವರು ಖ್ಯಾತ ಸೈಬರ್ ಭದ್ರತಾ ತಜ್ಞ ಮತ್ತು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸಾಯನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ. ಅನಂತ್ ಪ್ರಭು ಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನ ಕಾರ್ಯ ಮಾಡಿದ್ದರು. ಡಾ.ಮೆಲ್ವಿನ್ ಡಿ ಸೋಜ ಬಸ್ರೂರಿನ ಮೇರ್ಡಿಯವರಾಗಿದ್ದು, ದಿ.ಪೀಟರ್ ಡಿಸೋಜಾ ಮತ್ತು ಸ್ಟೆಲ್ಲಾ ಡಿಸೋಜಾ ಇವರ ಪುತ್ರ.

ಡಾ.ಮೆಲ್ವಿನ್‌ರ ಸಂಶೋಧನೆ ಆಧುನಿಕ ಕೃತಕಬುದ್ದಿ ಮತ್ತೆ ತಂತ್ರಜ್ಞಾನದಿಂದ ಆರಂಭಿಕ ಹಂತದಲ್ಲೇ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಸಂಶೋಧನ ವರದಿಯಾಗಿದ್ದು, ಈ ಸಂಶೋಧನೆಯ ಫಲಿತಾಂಶಗಳನ್ನು ಬರೆದು ಸಿದ್ದ ಪಡಿಸಿದ ವರದಿಗಳು ಅಂತಾರಾಷ್ಟ್ರೀಯ ಪ್ರತಿಷ್ಟಿತ ಸಂಶೋಧನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮೆಲ್ವಿನ್‌ರ ಸಾಧನೆಗೆ ಐಎಂಜೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಸಿದ್ದಾರ್ಥ್ ಜೆ ಶೆಟ್ಟಿ ಮತ್ತು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಅಬ್ದುಲ್ ಕರೀಮ್ ಅಭಿನಂದನೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News