ಉಡುಪಿಯಲ್ಲಿ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ

Update: 2024-10-14 15:55 GMT

ಉಡುಪಿ, ಅ.14: ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯ ದಲ್ಲಿ ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯ ಹಾಗೂ ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್‌ಗಳ ಸಹಯೋಗದಲ್ಲಿ 51ನೇ ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನ (ಆಲ್‌ಇಂಡಿಯಾ ಓರಿಯೆಂಟಲ್ ಕಾನ್ಫರೆನ್ಸ್) ಅ.24ರಿಂದ 26ರವರೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ತಿಳಿಸಿದ್ದಾರೆ.

ಪುತ್ತಿಗೆ ಮಠದ ಗೀತಾಮಂದಿರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ದೇಶ-ವಿದೇಶಗಳ 2000ಕ್ಕೂ ಅಧಿಕ ವಿದ್ವಾಂಸರು, ವಿವಿಧ ವಿಷಯಗಳ ತಜ್ಞರು ಹಾಗೂ ಪ್ರತಿನಿಧಿಗಳು ಪಾಲ್ಗೊಳ್ಳುವ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ನಡೆಯುವ ಈ ಸಮ್ಮೇಳನದ ವಿವರಗಳನ್ನು ಸ್ವಾಮೀಜಿ ನೀಡಿದರು.

ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಒಟ್ಟು 20ಕ್ಕೂ ಅಧಿಕ ವಿವಿಧ ಗೋಷ್ಠಿಗಳಿರುತ್ತವೆ. ಇವುಗಳು ರಾಜಾಂಗಣವಲ್ಲದೇ, ಗೀತಾ ಮಂದಿರ, ಶ್ರೀಕೃಷ್ಣ ಮಠದ ಆವರಣ ಹಾಗೂ ಪಕ್ಕದ ಸಂಸ್ಕೃತ ಕಾಲೇಜಿನಲ್ಲಿ ಏಕಕಾಲದಲ್ಲಿ ನಡೆಯಲಿವೆ. ಇದರಲ್ಲಿ ಬಾಲಸಾಹಿತ್ಯ, ಕನ್ನಡ, ಸಂಸ್ಕೃತ, ಪಾಲಿ, ಉರ್ದು, ಯೋಗ, ಆಯುರ್ವೇದ ಮುಂತಾದ ವಿಷಯ ಗಳಲ್ಲಿ ಒಟ್ಟು 23 ವಿಚಾರಸಂಕಿರಣಗಳು ನಡೆಯಲಿವೆ ಎಂದರು.

ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರು, ವ್ಯಾಸರಾಜ ಮಠದ ಶ್ರೀವಿದ್ಯಾಶ್ರೀಶತೀರ್ಥರು, ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥರು, ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥರು, ಪತಂಜಲಿಯ ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ಮುಂತಾದ ಸಂತರು ಹಾಗೂ ಯತಿಗಳು ಸಮ್ಮೇಳನದಲ್ಲಿ ಉಪಸ್ಥಿತರಿರುವರು ಎಂದವರು ತಿಳಿಸಿದರು.

ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಮುಂಜಾನೆ 6ರಿಂದ 7ರವರೆಗೆ ಯೋಗ-ಧ್ಯಾನಾದಿ ತರಗತಿಗಳೂ ನಡೆಯಲಿವೆ. ಭಗವದ್ಗೀತೆಯ ವಿಷಯದಲ್ಲಿ ಹಿರಿಯ ವಿದ್ವಾಂಸರಿಂದ ವಿಚಾರ ಗೋಷ್ಠಿಗಳು ಸಂವಾದ ನಡೆಯಲಿವೆ. ಅಲ್ಲದೇ ತರುಣರ ಕವಿಗೋಷ್ಠಿ, ಯುವ ವಿದ್ವಾಂಸ-ವಿದುಷಿಯರಿಂದ ವಾಕ್ಯಾರ್ಥ ಗೋಷ್ಠಿಗಳು, ಹಿರಿಯ ಪ್ರಸಿದ್ಧ ವಿದ್ವಾಂಸರಿಂದ ಶಾಸ್ತ್ರಾರ್ಥ ಸಭೆಗಳನ್ನು ಸಹ ಆಯೋಜಿಸಲಾಗಿದೆ ಎಂದು ಪುತ್ತಿಗೆಶ್ರೀಗಳು ವಿವರಿಸಿದರು.

ಕರ್ನಾಟಕದ ಪ್ರಸಿದ್ಧ ಅಭಿನವ ನೃತ್ಯ ಅಕಾಡೆಮಿಯಿಂದ ‘ತದ್ಭಾರತಂ’ ನೃತ್ಯ, ಉಡುಪಿ ತಂಡದಿಂದ ಯಕ್ಷನೃತ್ಯ ಸೇರಿ ದಂತೆ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಭಾರತದ ವಿವಿಧ ವಿಶ್ವ ವಿದ್ಯಾಲಯಗಳಿಂದ 18 ಕುಲಪತಿಗಳು ಉಪಸ್ಥಿತರಿದ್ದು, ಅವರೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಲಿದೆ ಎಂದರು.

ಭಾರತದ ಪ್ರಸಿದ್ಧ ಪ್ರಕಟಣಾ ಸಂಸ್ಥೆಗಳಿಂದ ಪುಸ್ತಕ ಪ್ರದರ್ಶನ, ಮಾರಾಟ ನಡೆಯಲಿದೆ. ಸಮ್ಮೇಳನದಲ್ಲಿ ಪ್ರಸಿದ್ಧ ವಿದ್ವಾಂ ಸರ 25 ನೂತನ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿರುತ್ತದೆ. ಭಾರತದ ಹಲವು ಭಾಗಗಳಿಂದ ಬೇರೆ ಬೇರೆ ವಿಷಯ ಗಳಿಗೆ ಸಂಬಂಧಿಸಿದ 2000ಕ್ಕೂ ಹೆಚ್ಚು ಶ್ರೇಷ್ಠ ವಿದ್ವಾಂಸರು ಆಗಮಿಸಿ, ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ ಪ್ರಾರಂಭಗೊಂಡು ಇದೀಗ 102 ವರ್ಷಗಳು ಸಂದಿವೆ. ಪ್ರತಿ ಎರಡು ವರ್ಷ ಗಳಿಗೊಮ್ಮೆ ಈ ಸಂಸ್ಥೆಯ ಅಧಿವೇಶನ ಭಾರತದ ವಿವಿಧ ಸ್ಥಳಗಳಲ್ಲಿ ನಡೆದು ಬಂದಿದೆ. ಇಲ್ಲಿಯ ತನಕ 50 ಅಧಿವೇಶನ ಗಳು ನಡೆದಿದ್ದು, 51ನೇ ಅಧಿವೇಶನ ಇದೀಗ ಉಡುಪಿಯಲ್ಲಿ ನಡೆಯುತ್ತಿದೆ. ಇಲ್ಲಿಯ ತನಕ ಕೇವಲ ಉತ್ತರ ಭಾರತ ದಲ್ಲಿಯೇ ನಡೆಯುತ್ತಿದ್ದ ಈ ಸಮ್ಮೇಳನ ಪ್ರಪ್ರಥಮ ಬಾರಿಗೆ ದಕ್ಷಿಣಭಾರತದಲ್ಲಿ ನಡೆಯುತ್ತಿರುವುದು, ಅದರಲ್ಲೂ ಕರ್ನಾಟಕದ ಆಚಾರ್ಯಮಧ್ವರ ಉಡುಪಿಯಲ್ಲಿ ನಡೆಯುತ್ತಿರು ವುದು ಅತ್ಯಂತ ಸಮುಚಿತವಾದ ವಿಷಯವಾಗಿದೆ ಎಂದು ಪತ್ರಿಕಾಗೋಷ್ಠಿ ಯಲ್ಲಿ ಉಪಸ್ಥಿತರಿದ್ದ ಹೊಸದಿಲ್ಲಿಯ ಕೇಂದ್ರೀಯ ಸಂಸ್ಕೃತ ವಿವಿಯ ಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ ಹಾಗೂ ಕರ್ನಾಟಕ ಸಂಸ್ಕೃತ ವಿವಿಯ ಡೀನ್ ಡಾ.ಶಿವಾನಿ ವಿ. ತಿಳಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News