ಉಡುಪಿ: ಡಿ.6ರಿಂದ ಕನಕ ಗಾಯನ ಸ್ಪರ್ಧೆ
ಉಡುಪಿ: 46ನೆಯ ‘ವಾದಿರಾಜ ಕನಕದಾಸ ಸಂಗೀತೋತ್ಸವ’ ಕಾರ್ಯಕ್ರಮ ಡಿಸೆಂಬರ್ 6,7 ಮತ್ತು 8ರಂದು ಉಡುಪಿಯ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ, ಕನಕದಾಸ ಅಧ್ಯಯನ ಸಂಶೋಧನ ಪೀಠ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ), ಎಂ.ಜಿ.ಎಂ ಕಾಲೇಜು ಉಡುಪಿ, ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ಸಂಘಟಿಸಲಿವೆ.
ಸಂಗೀತೋತ್ಸವದ ಪ್ರಯುಕ್ತ ಪ್ರಾಥಮಿಕ, ಪ್ರೌಢ, ಕಾಲೇಜು, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ವಾದಿರಾಜ- ಕನಕ ಗಾಯನ ಸ್ಪರ್ಧೆ ಡಿ.7ರಂದು ಅಪರಾಹ್ನ 2 ಗಂಟೆಗೆ ಎಂ.ಜಿ.ಎಂ ಕಾಲೇಜು ಆವರಣದ ಗೀತಾಂಜಲಿ ಸಭಾಂಗಣದಲ್ಲಿ ನಡೆಯಲಿದೆ.
ಸ್ಪರ್ಧಾಳುಗಳು ವಾದಿರಾಜ ಮತ್ತು ಕನಕದಾಸರ ಎರಡೆರಡು ಕೀರ್ತನೆಗಳನ್ನು ಅಭ್ಯಸಿಸಿ, ತೀರ್ಪುಗಾರರು ಕೇಳುವ ನಾಲ್ಕು ಕೀರ್ತನೆಗಳಲ್ಲಿ ಯಾವುದಾದರು ಒಂದು ಕೀರ್ತನೆಯನ್ನು ಹಾಡಲು ಶಕ್ತರಿರಬೇಕು. ಭಾಗವಹಿಸಲು ಇಚ್ಛಿಸುವವರು ಕಡ್ಡಾಯವಾಗಿ ತಮ್ಮ ಹೆಸರು, ವಿಳಾಸವನ್ನು ಡಿಸೆಂಬರ್ 1ರ ಒಳಗೆ ಆಡಳಿತಾಧಿಕಾರಿಗಳು, ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ ಕಾಲೇಜು ಆವರಣ, ಉಡುಪಿ 576102 ಈ ವಿಳಾಸಕ್ಕೆ ಕಳುಹಿಸಿಕೊಡಬಹುದು ಎಂದು ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 9964140601/ 9480575783, ಕಚೇರಿ: 0820-2521159 ಅಥವಾ ಇಮೇಲ್: rgpaiudupi@gmail.com-ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.