ಗಾಂಧಿ ಉಡುಪಿ ಭೇಟಿಗೆ 90ವರ್ಷ; ಒಂದು ಅವಲೋಕನ

Update: 2024-09-28 14:23 GMT

ಉಡುಪಿ, ಸೆ.28: ಉಡುಪಿಯ ಸಾಂಸ್ಕೃತಿಕ ವೇದಿಕೆ ರಥಬೀದಿ ಗೆಳೆಯರು ಉಡುಪಿ ಆಶ್ರಯದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಈ ವರ್ಷ ಗಾಂಧೀಜಿ ಉಡುಪಿಗೆ ಭೇಟಿ ಕೊಟ್ಟು 90 ವರ್ಷವಾದ ಹಿನ್ನೆಲೆಯಲ್ಲಿ ‘ಗಾಂಧೀಜಿ ಉಡುಪಿ ಭೇಟಿಗೆ ತೊಂಬತ್ತು- ಒಂದು ಅವಲೋಕನ’ ಕಾರ್ಯಕ್ರಮ ಅಕ್ಟೋಬರ್ 2ರ ಬುಧವಾರ ಸಂಜೆ 5 ಗಂಟೆಗೆ ಉಡುಪಿ ಅದಮಾರು ಮಠ ಲೇನ್‌ನಲ್ಲಿರುವ ರಥಬೀದಿ ಗೆಳೆಯರು ಸಂಸ್ಥೆಯ ಕಚೇರಿಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಉಡುಪಿ ಎಂ.ಜಿಂ.ಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕರಾದ ವಿನೀತ್ ರಾವ್ ಗಾಂಧಿ ಭೇಟಿಯ ಅವಲೋಕನ ಮಾಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ ಮತ್ತು ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News