ನ.30ರಿಂದ ಜೂನಿಯರ್ ಕಾರ್ಟೂನು ಹಬ್ಬ
ಕುಂದಾಪುರ, ನ.29: ಜೂನಿಯರ್ ಕಾರ್ಟೂನು ಹಬ್ಬವನ್ನು ನ.30 ಮತ್ತು ಡಿ.1ರಂದು ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ನ.30ರಂದು ಬೆಳಗ್ಗೆ 10.30ಕ್ಕೆ ಕಾರ್ಟೂನು ಹಬ್ಬವನ್ನು ಮಾಲ್ಗುಡಿ ಡೇಸ್ ಖ್ಯಾತಿಯ ನಟ ಮಂಜುನಾಥ್ ನಾಯ್ಕರ್ (ಮಾಸ್ಟರ್ ಮಂಜುನಾಥ್) ಉದ್ಘಾಟಿಸಲಿರುವರು. ವಿಶೇಷ ಅತಿಥಿಗಳಾಗಿ ತಕ್ಷಶಿಲಾ ಇನ್ಸ್ಟಿಟ್ಯೂಶನ್ ಬೆಂಗಳೂರು ಸಿಓಓ ಸೌಮ್ಯ ಪ್ರಭಾಕರ್, ಬ್ರಹ್ಮಾವರ ಎಸ್‌ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲೆ ಅಭಿಲಾಷಾ ಹಂದೆ, ಶಿಕ್ಷಕ ಅಶೋಕ್ ತೆಕ್ಕಟ್ಟೆ, ಫೆಡರಲ್ ಬ್ಯಾಂಕ್ ಕುಂದಾಪುರ ಶಾಖಾ ಪ್ರಬಂಧಕ ಅನೀಶ್ ಕುಮಾರ್ ಭಾಗವಹಿಸಲಿದ್ದಾರೆ.
ಕಲಾ ಶಿಕ್ಷಕ ಕಲಾವಿದ ಯು.ಮಂಜುನಾಥ್ ಮಯ್ಯ ಉಪ್ಪುಂದ, ವಿಕೆಆರ್ ಆಚಾರ್ ಶಾಲೆ ಕುಂದಾಪುರ ಕಲಾ ಶಿಕ್ಷಕ ಎಚ್.ರಮೇಶ್ ಹಾಂಡ ಅವರನ್ನು ಸನ್ಮಾನಿಸಲಾಗುವುದು. ಅವಿಭಜಿತ ದ.ಕ. ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ಪೋಷಕ ಕಾರ್ಟೂನು ಸ್ಪರ್ಧೆ ನಡೆಯಲಿದೆ.
ಡಿ.1ರಂದು ಬೆಳಗ್ಗೆ 10.30ಕ್ಕೆ ಮಾಸ್ಟರ್ ಕಾರ್ಟೂನಿಸ್ಟ್ ಕಾರ್ಯಕ್ರಮದಲ್ಲಿ ಕ್ಯಾರಿಕೇಚರ್ ಕಲೆಯ ಬಗ್ಗೆ ವಿಶ್ವಮಟ್ಟದ ಕ್ಯಾರಿಕೇಚರ್ ಕಲಾವಿದ ಶಿಜೋ ವರ್ಗಿಸ್ ಅವರಿಂದ ಪ್ರಾತ್ಯಕ್ಷಿಕೆ ಹಾಗೂ ಕಾರ್ಯಾಗಾರ ನಡೆಯಲಿದೆ. ಇದರಲ್ಲಿ ಟಿಪ್ಸ್ ಹಂಚಿಕೊಳ್ಳಲಿರುವ ನುರಿತ ವ್ಯಂಗ್ಯಚಿತ್ರಕಾರರಾಗಿ ಬಿ.ಜಿ. ಗುಜ್ಜಾರಪ್ಪ, ವೈ.ನಂಜುಂಡಸ್ವಾಮಿ, ಜೇಮ್ಸ್ ವಾಜ್, ಸತೀಶ್ ಆಚಾರ್ಯ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.