ಬೆಂಗಳೂರು-ಮೈಸೂರು-ಮುರ್ಡೇಶ್ವರ ರೈಲಿಗೆ ಕುಂದಾಪುರದಲ್ಲಿ ಸ್ವಾಗತ
ಕುಂದಾಪುರ, ಸೆ.17: ಬೆಂಗಳೂರಿನಿಂದ ಮೈಸೂರು ಮೂಲಕ ಮಂಗಳೂರಿಗೆ ಸಂಚರಿಸುತ್ತಿದ್ದ ನಿತ್ಯದ ರೈಲು ಮುರ್ಡೇಶ್ವರ ದವರೆಗೆ ವಿಸ್ತರಣೆಗೊಂಡಿದ್ದು, ರವಿವಾರ ಬೆಳಗ್ಗೆ ಕುಂದಾಪುರಕ್ಕೆ ಪ್ರಥಮವಾಗಿ ಆಗಮಿಸಿದ ರೈಲಿಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ವತಿಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸದಸ್ಯರು, ರೈಲು ಪ್ರಯಾಣಿಕರು, ಕೋಟೇಶ್ವರ ರೋಟರಿ ಕ್ಲಬ್ ಸದಸ್ಯರು, ರೈಲು ಪ್ರಯಾಣಿಕರು ಸಿಹಿ ಹಂಚಿ ಸಂಭ್ರಮಿಸಿದರು. ಚೆಂಡೆ ವಾದನದೊಂದಿಗೆ ರೈಲನ್ನು ಬರಮಾಡಿಕೊಳ್ಳಲಾಯಿತು. ರೈಲಿಗೆ ಹೂವಿನ ಮಾಲೆ ಹಾಕಲಾಯಿತು.
ಕುಂದಾಪುರ ರೈಲು ಪ್ರಯಾಣಿಕರ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಸದಸ್ಯರಾದ ಗೌತಮ್ ಶೆಟ್ಟಿ, ವಿವೇಕ್ ನಾಯಕ್ ಮಾತನಾಡಿದರು. ಈ ಸಂದರ್ಭದಲ್ಲಿ ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಜಗದೀಶ್ ಮೊಗವೀರ, ಸಹಾಯಕ ಗವರ್ನರ್ ಮೊಳಹಳ್ಳಿ ಗಣೇಶ್ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಸತೀಶ್ ನಾಯಕ, ವರದರಾಜ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಮಾರ್ಕೋಡು, ಗೋಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಶೆಟ್ಟಿ, ಗ್ರಾಪಂ ಸದಸ್ಯ ನಾಗರಾಜ ಆಚಾರ್ ಹಂಗಳೂರು, ಬಿಜೆಪಿ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಕ್ಲೀನ್ ಕುಂದಾಪುರದ ಭರತ್ ಬಂಗೇರ, ಸಮಿತಿಯ ಸದಸ್ಯರಾದ ಕೆಂಚನೂರು ಸೋಮಶೇಖರ್ ಶೆಟ್ಟಿ, ರಾಘವೇಂದ್ರ ಶೇಟ್, ಉದಯ ಭಂಡಾರ್ಕರ್, ಅಭಿಜಿತ್ ಸಾರಂಗ, ಪೃಥ್ವಿ ಕುಂದರ್, ವಿಶಾಲ್ ಶೆನೋಯ್ ಪ್ರವೀಣ್, ಜೋಯ್ ಕರ್ವಾಲೊ, ಸುಧಾಕರ್ ಶೆಟ್ಟಿ, ವಿವೇಕ್ ನಾಯಕ್, ಯು.ಎಸ್. ಶೆಣೈ, ಶ್ರೀಧರ್ ಸುವರ್ಣ, ರಾಜೇಶ್, ಪದ್ಮನಾಭ್ ಶೆಣೈ, ರಾಜೇಶ್ ಕಾವೇರಿ, ಚಿಂದಂಬರ್ ಉಡುಪ ಮತ್ತಿತರರು ಉಪಸ್ಥಿತರಿದ್ದರು.