ಮಕ್ಕಳು ಬಾಲ್ಯದಿಂದಲೇ ಗ್ರಂಥಾಲಯದ ಸದ್ಭಾಳಕೆ ಮಾಡಲಿ: ಡಾ.ನಿಕೇತನ
ಉಡುಪಿ : ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯರ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದ ಮಕ್ಕಳ ಸಮುದಾಯ ಕೇಂದ ಗ್ರಂಥಾಲಯದಲ್ಲಿ ರಾಷ್ಟ್ರೀಯ ಗ್ರಂಥಾಲಯದ ಸಪ್ತಾಹದ ಅಂಗವಾಗಿ ಮಕ್ಕಳಿಗಾಗಿ ವಿವಿಧ ಒಳಾಂಗಣ ಆಟ ಮತ್ತು ಚಿತ್ರಕಲಾ ಸ್ಪರ್ಧೆಯನ್ನು ನ.4 ರಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅಜ್ಜರಕಾಡಿನ ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕಾಲೇಜಿನ ಪ್ರಾಧ್ಯಾಪಕಿ ಹಾಗೂ ಸಾಹಿತಿ ಡಾ.ನಿಕೇತನ ಮಾತನಾಡಿ, ಮಕ್ಕಳು ಪಠ್ಯ ಪುಸ್ತಕಗಳೊಂದಿಗೆ ಪಠ್ಯೇತರ ಚಟುವಟಿಕೆ ಗಳಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳನ್ನು ಗ್ರಂಥಾಲಯದೆಡೆ ಅಕರ್ಷಿಸುವ ಕೆಲಸವನ್ನು ಗ್ರಂಥಾಲಯವು ಮಾಡು ತಿರುವುದು ನಿಜ್ಜಕ್ಕೂ ಶ್ಲಾಘನೀಯ ಎಂದರು.
ಮಕ್ಕಳ ವಿವಿಧ ಆಟಿಕೆಗಳ ಜೊತೆ ಪುಸ್ತಕಗಳು ಇದ್ದು ಈ ಗ್ರಂಥಾಲಯವು ಬಹಳ ಆಕರ್ಷಿಣಿಯವಾಗಿದೆ. ಜ್ಙಾನ ದೇಗುಲ ವಾಗಿರುವ ಈ ಗ್ರಂಥಾಲಯವು ಮುಂದಿನ ಭವಿಷ್ಯ ರೂಪಿಸಲು ವೇದಿಕೆಯಾಗಿದೆ. ಮಕ್ಕಳು ಬಾಲ್ಯದಿಂದಲೇ ಇಂತಹ ಗ್ರಂಥಾಲಯದ ಸದ್ಭಾಳಕೆ ಮಾಡಬೇಕು ಎಂದು ಅವರು ತಿಳಿಸಿದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ದರು. ಗ್ರಂಥಪಾಲಕಿ ಸಿ.ರಂಜಿತಾ. ವಂದಿಸಿದರು. ಪ್ರಥಮ ದರ್ಜೆ ಸಹಾಯಕ ಶಕುಂತಳಾ ಕುಂದರ್ ಉಪಸ್ಥಿತರಿ ದ್ದರು. ಮಕ್ಕಳ ಸಮುದಾಯ ಕೇಂದ್ರ ಗ್ರಂಥಾಲಯ ಮೇಲ್ವಿಚಾರಕಾರದ ಆಶಾ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ಸುಮಾರು ೭೫ಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಿದ್ದರು.