ಉಡುಪಿ: ಎ.28ರವರೆಗೆ ಜಂಬೋ ಸರ್ಕಸ್

ಉಡುಪಿ: ದೇಶದ ಅತಿ ದೊಡ್ಡ ಸರ್ಕಸ್ ಎನಿಸಿರುವ ಜಂಬೋ ಸರ್ಕಸ್ ಎ.28ರವರೆಗೆ ಉಡುಪಿಯ ಕರಾವಳಿ ಬೈಪಾಸ್ ಬಳಿಯ ಶಾರದಾ ಇಂಟರ್‌ನ್ಯಾಷನಲ್ ಹೊಟೇಲ್ ಪಕ್ಕದ ಮೈದಾನದಲ್ಲಿ ತನ್ನ ಪ್ರದರ್ಶನವನ್ನು ಪ್ರಾರಂಭಿಸಿದೆ ಎಂದು ಮ್ಯಾನೇಜರ್ ಸುರೇಶ್ ಬಾಬು ತಿಳಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಬೋ ಸರ್ಕಸ್ ಹತ್ತು ವರ್ಷಗಳ ಬಳಿಕ ಉಡುಪಿಗೆ ಆಗಮಿಸಿದ್ದು, ಪ್ರತಿ ದಿನ ಮೂರು- ಅಪರಾಹ್ನ 1:00ಕ್ಕೆ ಸಂಜೆ 4:00 ಮತುತ 7:00ಕ್ಕೆ- ಪ್ರದರ್ಶನಗಳನ್ನು ನೀಡಲಿದೆ ಎಂದರು.
ಬೆಂಗಳೂರು ಹಾಗೂ ಚಿಕ್ಕಮಗಳೂರುಗಳಲ್ಲಿ ಪ್ರದರ್ಶನ ನೀಡಿದ ಬಳಿಕ ನಮ್ಮ ತಂಡ ಉಡುಪಿಗೆ ಆಗಮಿಸಿದೆ. ತಂಡದಲ್ಲಿ 100 ಮಂದಿ ಪುರುಷ ಮತ್ತು ಮಹಿಳೆಯರು ಸೇರಿದಂತೆ ದೇಶ-ವಿದೇಶಗಳ ಸರ್ಕಸ್ ಕಲಾವಿದರಿದ್ದಾರೆ. ಎರಡು ಗಂಟೆಗಳ ಕಾಲ ಇವರು ಜನರು ನಿಬ್ಬೆರಗಾಗುವಂತೆ ಪ್ರದರ್ಶನ ನೀಡಲಿದ್ದಾರೆ. ನ್ಯಾಯಾಲಯದ ನಿಷೇಧದ ಬಳಿಕ ನಾವು ಯಾವುದೇ ಜೀವಂತ ಪ್ರಾಣಿಗಳನ್ನು ಹೊಂದಿಲ್ಲ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮ್ಯಾನೇಜರ್‌ಗಳಾದ ಟೈಟಸ್ ವರ್ಗೀಸ್ ಹಾಗೂ ರಾಜೀವನ್ ಉಪಸ್ಥಿತರಿದ್ದರು.