ಮಣಿಪಾಲ: ಐಟಿಐ ವಿದ್ಯಾರ್ಥಿಗಳಿಗೆ ಹೂಡಿಕೆ ಜಾಗೃತಿ

Update: 2025-04-01 21:34 IST
ಮಣಿಪಾಲ: ಐಟಿಐ ವಿದ್ಯಾರ್ಥಿಗಳಿಗೆ ಹೂಡಿಕೆ ಜಾಗೃತಿ
  • whatsapp icon

ಉಡುಪಿ, ಎ.1: ಮಣಿಪಾಲದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ನಲ್ಲಿ ಸಿಡಿಎಸ್‌ಎಲ್ ಇನ್ವೆಸ್ಟರ್ ಪ್ರೆಟೆಕ್ಷನ್ ಫಂಡ್ (ಸಿಡಿಎಸ್‌ಎಲ್ ಐಪಿಎಫ್) ಸಂಸ್ಥೆಯು ವಿದ್ಯಾರ್ಥಿಗಳಿಗೆ ಹೂಡಿಕೆ ಜಾಗೃತಿ ಕಾರ್ಯಕ್ರಮ ವನ್ನು ಆಯೋಜಿಸಿತ್ತು.

ವಿದ್ಯಾರ್ಥಿಗಳು ಆರ್ಥಿಕ ಸಾಕ್ಷರತೆ ಗಳಿಸಲು ಪ್ರೋತ್ಸಾಹ ನೀಡುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆ ಮೂಲಕ ಹೂಡಿಕೆದಾರರಿಗೆ ಮೂಲಧನ ಮಾರುಕಟ್ಟೆಯಲ್ಲಿ ತಮ್ಮ ಹೂಡಿಕೆಗಳ ಕುರಿತು ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ನೆರವಾಗಲಿದೆ. ಜೊತೆಗೆ ಹೂಡಿಕೆಯ ಮೂಲಭೂತ ತತ್ವಗಳನ್ನು ವಿವರಿಸಲಾಯಿತು.

ವಿದ್ಯಾರ್ಥಿಗಳಿಗೆ ಹೂಡಿಕೆಯ ಪರಿಕಲ್ಪನೆಗಳನ್ನು ಸರಳ ಕನ್ನಡದಲ್ಲೇ ತಿಳಿಸಲಾಯಿತು. ಮೂಲಧನ ಮಾರುಕಟ್ಟೆ ಮತ್ತು ಡಿಪಾಸಿಟರಿ ಸೇವೆಗಳ ಪ್ರಾಥಮಿಕ ಪರಿಚಯ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರವಾಗಿ ಮಾತನಾಡಿದರು.

ಹೂಡಿಕೆದಾರರಿಗೆ ಶಿಕ್ಷಣ ಒದಗಿಸುವ ಈ ಕ್ರಮವು ಮೂಲಧನ ಮಾರುಕಟ್ಟೆಯಲ್ಲಿ ಆರ್ಥಿಕ ಒಳಗೊಳ್ಳು ವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಿಡಿಎಸ್‌ಎಲ್ ಐಪಿಎಫ್ ಸಂಸ್ಥೆಯು ಈ ಮೂಲಕ ಹೂಡಿಕೆದಾರರಿಗೆ ಮೂಲಧನ ಮಾರುಕಟ್ಟೆಯ ಸವಾಲುಗಳನ್ನು ಆತ್ಮವಿಶ್ವಾಸದಿಂದ ನಿಭಾಯಿ ಸಲು ಮತ್ತು ಆತ್ಮನಿರ್ಭರ ಹೂಡಿಕೆದಾರ ಆಗಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಟಣೆ ವಿವರಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News