ಪುರೋಹಿತರು ಸ್ವಾಭಿಮಾನ ಬೆಳೆಸಿಕೊಳ್ಳಬೇಕು: ಪುತ್ತಿಗೆ ಸ್ವಾಮೀಜಿ

ಉಡುಪಿ, ಎ.5: ಅಂತಾರಾಷ್ಟ್ರೀಯ ಪಿತೂರಿಯ ಮೂಲಕ ಹಿಂದೂ ಧರ್ಮ ವನ್ನು ಹಾಳು ಮಾಡುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಪ್ರಭಾವಿತರಾಗದಂತೆ ನಮ್ಮ ಮಕ್ಕಳು ತಡೆಯಬೇಕಾಗಿದೆ. ಹಿಂದೂ ಧರ್ಮ, ಸಂಸ್ಕೃತಿ, ಸಂಸ್ಕಾರ ಉಳಿಯಲು ಸತ್ಕಾರ್ಯಗಳ ಹಿನ್ನೆಲೆಯಲ್ಲಿ ಪುರೋಹಿತರು ಹೆತ್ತರಿಗೆ ತಿಳಿ ಹೇಳಬೇಕು. ಮನಃ ಪರಿವರ್ತನೆ ಮಾಡಿದರೆ ಮಕ್ಕಳನ್ನು ತಿದ್ದಬಹುದು. ಪುರೋಹಿತರು ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಅವರು ಪರ್ಯಾಯ ಪುತ್ತಿಗೆ ಮಠ, ಶ್ರೀಕೃಷ್ಣಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಶನಿವಾರ ನಡೆದ ಹಿರಿಯಡ್ಕ ಶ್ರೀಪುತಿತಿಗೆ ವಿದ್ಯಾಪೀಠದ 40ನೇ ವಾರ್ಷಿಕೋತ್ಸವ, ಪಾಡಿಗಾರು ಶ್ರೀಪುತಿತಿಗೆ ಸುಗುಣ ಸ್ಕೂಲಿನ ಪ್ರಥಮ ವಾರ್ಷಿಕೋತ್ಸವ, ಸುವರ್ಣ ಪೀಠಾರೋಹಣ ಸಂಭ್ರಮ ಉದ್ಘಾಟನಾ ಸಮಾರಂಭ ದಲ್ಲಿ ಆಶೀರ್ವಚನ ನೀಡಿದರು.
ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಕೋಟಿ ಗೀತಾ ಲೇಖನ ಯಜ್ಞ ಸಮಿತಿ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ವಿಪ್ರ ಮಕ್ಕಳಲ್ಲಿ ಧರ್ಮ ಶ್ರದ್ಧೆಯ ಪ್ರವರ್ಧನೆ ಹೇಗೆ ವಿಷಯವಾಗಿ ಚಿಂತನ ಮಂಥನದಲ್ಲಿ ವಿದ್ವಾನ್ ಕುಮಾರ ಗುರು ತಂತ್ರಿ, ವಿದ್ವಾನ್ ವಾಸುದೇವ ಭಟ್ ಪಾವಂಜೆ, ವಿದ್ವಾನ್ ವೆಂಕಟೇಶಾಚಾರ್ಯ ಪಡುಬಿದ್ರೆ, ವಿದ್ವಾನ್ ಸ್ಕಂದ ಪ್ರಸಾದ್ ಭಟ್ ಕಡಂದಲೆ ವಿಷಯ ಮಂಡಿಸಿದರು.
ಸಾಧಕರಾದ ವಿದ್ವಾನ್ ನಾಗೇಂದ್ರಾಚಾರ್ಯ ಹೈದರಾಬಾದ್, ವೇದ ಮೂರ್ತಿ ಎಸ್.ಅನಂತ ಅಡಿಗ ರಾಮೇಶ್ವರ, ವೇದಮೂರ್ತಿ ಶ್ರೀಪತಿ ಆಚಾರ್ಯ ಮುಂಬೈ, ವೇದಮೂರ್ತಿ ಮಧ್ವರಾಯ ಭಟ್ ನಂದಿ ಕೂರು, ಆಗಮ ವಿದ್ವಾನ್ ಕೆ.ಎಸ್.ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ, ಬೆಂಗಳೂರಿನ ಜ್ಯೋತಿಷಿ ವೇದಮೂರ್ತಿ ಡಾ.ಕೆ.ನಾಗರಾಜ ನಕ್ಷತ್ರಿ ಅವರನ್ನು ಈ ಸಂದರ್ಭ ದಲ್ಲಿ ಸನ್ಮಾನಿಸಲಾಯಿತು.
ಬಳಿಕ ಕರಾವಳಿ ಸಂಸ್ಕೃತೋತ್ಸವ, ಪಾಡಿಗಾರಿನ ಶ್ರೀಪುತ್ತಿಗೆ ಸುಗುಣ ಸ್ಕೂಲಿನ ಪ್ರಥಮ ವಾರ್ಷಿ ಕೋತ್ಸವ ಸಂಭ್ರಮ ನಡೆಯಿತು. ವಿದ್ವಾನ್ ಶ್ರೀನಿವಾಸ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಬಿ.ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.