ರಾಜ್ಯಮಟ್ಟದ ‘ಸಾವಿಷ್ಕಾರ್’ ಸ್ಪರ್ಧೆ: ಕುಂದಾಪುರ ಬಿಬಿ ಹೆಗ್ಡೆ ಕಾಲೇಜು ಚಾಂಪಿಯನ್

ಕುಂದಾಪುರ, ಎ.5: ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯ ವತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಎರಡು ದಿನಗಳ ಅಂತರ್ ಕಾಲೇಜು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟದಲ್ಲಿ ಕುಂದಾಪುರದ ಬಿಬಿ ಹೆಗ್ಡೆ ಕಾಲೇಜ್ ಸಮಗ್ರ ಪ್ರಶಸ್ತಿ ಹಾಗೂ ಶಿರ್ವದ ಸೈಂಟ್ ಮೇರೀಸ್ ಕಾಲೇಜು ರನ್ನರ್ ಅಪ್ ಪ್ರಶಸ್ತಿ ಗೆದ್ದುಕೊಂಡಿದೆ.
ಐಎಂಜೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸಿದ್ದಾರ್ಥ ಜೆ.ಶೆಟ್ಟಿ ಟ್ರೋಫಿ ಬಿಡುಗಡೆ ಮಾಡಿ ಸ್ಪರ್ಧೆಗೆ ಚಾಲನೆ ನೀಡಿದರು. ಈ ಸ್ಪರ್ಧಾಕೂಟದಲ್ಲಿ ರಾಜ್ಯದ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನ ಪ್ರದರ್ಶಿಸಿದರು.
ಎಲ್ಲಾ ವಿಭಾಗದ ವಿಜೇತರಿಗೆ ನಗದು ಬಹುಮಾನದ ಜೊತೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. 30ಕ್ಕೂ ಅಧಿಕ ಕಂಪನಿಗಳ ಮಾದರಿ ಕಾರುಗಳು ಮತ್ತು 75ಕ್ಕೂ ಅಧಿಕ ವಿವಿಧ ಬೈಕ್‌ಗಳ ಪ್ರದರ್ಶನ ನಡೆಯಿತು. ಅಲ್ಲದೇ ಆರ್‌ಡಿಎಕ್ಸ್‌ನ ತಜ್ಞರಿಂದ ಬೈಕ್ ಸ್ಟಂಟ್ ಪ್ರದರ್ಶನ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ಎರಡು ದಿನಗಳ ಸಂಜೆಯ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ, ಗಾಯಕಿ ದಿವ್ಯ ರಾಮಚಂದ್ರ ಮತ್ತು ಗಾಯಕ ಸುಪ್ರೀತ್ ಅವರ ಜೊತೆ ಪ್ರಸಿದ್ಧ ರಾಪ್ ಗಾಯಕ ರಾಹುಲ್ ಡಿಟ್ಟೋ ಕಾರ್ಯಕ್ರಮ ನೀಡಿದರು.