ಕಿಂಡಿ ಅಣೆಕಟ್ಟಿಗೆ ಬಿದ್ದು ಪೌರ ಕಾರ್ಮಿಕ ಮೃತ್ಯು
Update: 2025-04-05 21:00 IST

ಶಿರ್ವ, ಎ.5: ಪಾದೂರು ಗ್ರಾಮದ ಪೈಂತೂರು ಕಿಂಡಿ ಆಣೆಕಟ್ಟಿನಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಪೌರ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಮಲ್ಲಾರು ಗ್ರಾಮದ ಪಕೀರ್ಣಕಟ್ಟೆ ನಿವಾಸಿ ಸುರೇಶ್(42) ಎಂದು ಗುರುತಿಸಲಾಗಿದೆ. ಕಾಪು ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿರುವ ಇವರಿಗೆ, ಮೀನು ಹಿಡಿಯುವ ಅಭ್ಯಾಸವಿದ್ದು, ಅದರಂತೆ ಇವರು ಎ.1ರಂದು ಮನೆಯಿಂದ ಮೀನು ಹಿಡಿಯಲು ಹೋದವರು ನಾಪತ್ತೆಯಾಗಿದ್ದರು. ಬಳಿಕ ಹುಡುಕಾಟ ನಡೆಸಿ ದಾಗ ಇವರ ಮೃತದೇಹವು ಪೈಂತೂರು ಕಿಂಡಿ ಅಣೆಕಟ್ಟಿನ ನೀರಿನಲ್ಲಿ ಎ.4ರಂದು ಸಂಜೆ ವೇಳೆ ಪತ್ತೆಯಾಗಿದೆ.
ಇವರು ಗಾಳ ಹಾಕಿ ಮೀನು ಹಿಡಿಯುವ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ತಿಳಿದುಬಂದಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.