ಉಡುಪಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆ
Update: 2025-04-05 20:26 IST

ಉಡುಪಿ, ಎ.5: ಉಡುಪಿ ಜಿಲ್ಲೆಯ ವಿವಿಧೆಡೆ ಇಂದು ಸಂಜೆ ವೇಳೆ ಉತ್ತಮ ಮಳೆಯಾಗಿದೆ. ಈ ಮೂಲಕ ಬಿಸಿಲಿನಿಂದ ಕಂಗೆಟ್ಟಿದ್ದ ವಾತಾವರಣ ತಂಪಾಗಿದೆ.
ಇಂದು ನಸುಕಿನ ವೇಳೆ ಕಾಪು, ಉಡುಪಿ ಸೇರಿದಂತೆ ಕೆಲವು ಕಡೆ ಗಾಳಿ ಸಹಿತ ಮಳೆಯಾಗಿತ್ತು. ಬಳಿಕ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣ ಇತ್ತು. ಸಂಜೆ ವೇಳೆ ಮತ್ತೆ ಮಳೆಯಾಗಿದೆ. ಉಡುಪಿ, ಮಣಿಪಾಲದಲ್ಲಿ ಸಂಜೆ ವೇಳೆ ಗುಡುಗು ಸಹಿತ ಉತ್ತಮ ಮಳೆಯಾಗಿದೆ.
ಅದೇ ರೀತಿ ಕಾರ್ಕಳ, ಬ್ರಹ್ಮಾವರ, ಕುಂದಾಪುರ ಮಳೆಯಾಗಿದೆ. ಕಾಪು ಪರಿಸರದಲ್ಲಿ ತುಂತುರು ಮಳೆ ಸುರಿದಿದೆ. ಹೀಗೆ ಸಂಜೆಯ ಬಳಿಕ ವಾತಾವರಣ ತಂಪಾಗಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ ಜನರಿಗೆ ತಂಪಿನ ವಾತಾವರಣ ಕಲ್ಪಿಸಿದೆ. ಮಳೆಯಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.