ಕಾಪು | ಸ್ಕೂಟರ್-ಟೆಂಪೋ ಅಪಘಾತ: ಸವಾರ ಮಗ ಮೃತ್ಯು, ತಾಯಿಗೆ ಗಾಯ
Update: 2024-03-03 09:52 GMT
ಉಡುಪಿ, ಮಾ.3: ಸ್ಕೂಟರ್ ಮತ್ತು ಟೆಂಪೋ ಮಧ್ಯೆ ಇಂದು ಬೆಳಗ್ಗೆ ಉದ್ಯಾವರ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬ ಮೃತಪಟ್ಟು, ಸಹ ಸವಾರ ಮಹಿಳೆ ತೀವ್ರವಾಗಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಮೃತರನ್ನು ಉಚ್ಚಿಲ ಪೊಲ್ಯ ಮೂಲದ ಪಡುಬಿದ್ರೆ ಕನ್ನಂಗಾರು ನಿವಾಸಿ ಅಝೀಝ್ ಎಂಬವರ ಪುತ್ರ ಮುಫ್ರೀನ್(18) ಎಂದು ಗುರುತಿಸಲಾಗಿದೆ. ಸಹಸವಾರೆಯಾಗಿದ್ದ ಮೃತರ ತಾಯಿ ಹಾಜಿರಾ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸ್ಕೂಟರ್ ಗೆ ಟೆಂಪೋ ಢಿಕ್ಕಿ ಹೊಡೆಯಿದಿದೆಯೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಮುಫ್ರೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.