ಅಂಚೆ ಇಲಾಖೆಯಿಂದ ಪತ್ರ ಲೇಖನ ಸ್ಪರ್ಧೆ

Update: 2023-08-22 15:34 GMT

ಉಡುಪಿ : ಭಾರತೀಯ ಅಂಚೆ ಇಲಾಖೆಯ ವತಿಯಿಂದ ನವ ಭಾರತದ ನಿರ್ಮಾಣಕ್ಕಾಗಿ ಡಿಜಿಟಲ್ ಇಂಡಿಯಾ (ಡಿಜಿಟಲ್ ಇಂಡಿಯಾ ಫಾರ್ ನ್ಯೂ ಇಂಡಿಯಾ) ಎಂಬ ವಿಷಯದ ಕುರಿತು 18 ವರ್ಷ ಒಳಗಿನವರಿಗೆ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಮುಕ್ತವಾಗಿ ಭಾಗವಹಿಸಲು ಪತ್ರ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧಾ ಪಟುಗಳು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಅಂತರ್ದೇಶಿಯ ಪತ್ರದಲ್ಲಿ ಐದು ನೂರು ಶಬ್ದಗಳಿಗೆ ಮೀರದಂತೆ ಅಥವಾ ಎ೪ ಹಾಳೆಯಲ್ಲಿ ಒಂದು ಸಾವಿರ ಶಬ್ದಗಳು ಮೀರದಂತೆ ಲೇಖನವನ್ನು ಕೈಬರಹದಲ್ಲಿ ಬರೆದು, ಅಂಚೆ ಲಕೋಟೆಯಲ್ಲಿ ಹಾಕಿ, ಅಕ್ಟೋಬರ್ 31 ರೊಳಗೆ ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ ಇವರಿಗೆ ಸಲ್ಲಿಸಬೇಕು.

ಲೇಖನವನ್ನು ಬರೆಯುವಾಗ ಸ್ಪರ್ಧಾಳುಗಳು ತಮ್ಮ ಲೇಖನವನ್ನು ಚೀಫ್ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ವೃತ್ತ, ಬೆಂಗಳೂರು-೫೬೦೦೦೧ ಇವರಿಗೆ ಉದ್ದೇಶಿಸಿ ಬರೆಯಬೇಕಾಗಿದ್ದು, ಲಕೋಟೆಯ ಮೇಲೆ ಢಾಯೀ ಆಕರ್ ಎಂದು ನಮೂದಿಸಿ, ಅದರೊಂದಿಗೆ ೧೮ ವಷರ್ ಮೇಲಿನವರು/ ೧೮ ವರ್ಷ ಕೆಳಗಿನವರು ಎಂಬ ಮಾಹಿತಿಯನ್ನು ಸ್ಪಷ್ಟವಾಗಿ ಬರೆದು ಸಲ್ಲಿಸಬೇಕು.

ಪತ್ರಲೇಖನ ಸ್ಪರ್ಧೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ಮಾಹಿತಿಗಾಗಿ ಅಂಚೆ ಕಚೇರಿ ದೂ.ಸಂಖ್ಯೆ: ೦೮೨೦-೨೫೨೧೭೮೦ ಅಥವಾ ವೆಬ್‌ಸೈಟ್ -www.indiapost.gov.in- ಹಾಗೂ -www.karnatakapost.gov.in-ಅನ್ನು ಸಂಪರ್ಕಿಸಬಹುದು ಎಂದು ಉಡುಪಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News