ಮಲ್ಪೆ: ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ

Update: 2024-08-14 14:24 GMT

ಉಡುಪಿ : ಮೀನುಗಾರಿಕೆ ಇಲಾಖೆಯ ವತಿಯಿಂದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಬುಧವಾರ ಮಲ್ಪೆಯಲ್ಲಿರುವ ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಜರುಗಿತು.

ಮಲ್ಪೆ ಫಿಶರೀಸ್ ಒಕ್ಕೂಟದ ಅಧ್ಯಕ್ಷ ದಯಾನಂದ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಸ್ರೋ ಭಾರತದ ಹೆಮ್ಮೆಯ ಸಂಸ್ಥೆಯಾಗಿದೆ. ಮೀನುಗಾರರ ಭದ್ರತೆಯ ಉದ್ದೇಶದಿಂದ ಸಮುದ್ರದಲ್ಲಿ ಮೀನುಗಾರರಿಗೆ ತೊಂದರೆ ಉಂಟಾ ದಾಗ ಸ್ಯಾಟಲೈಟ್ ಮೂಲಕ ಅಪಾಯ ಕ್ಕೊಳಗಾದ ಮೀನುಗಾರರೊಂದಿಗೆ ಸಂಪರ್ಕ ಹೊಂದಿ, ಅಗತ್ಯ ರಕ್ಷಣಾ ಕಾರ್ಯ ಗಳನ್ನು ಕೈಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಮೀನುಗಾರರ ಸಂರಕ್ಷಣೆಯ ನಿಟ್ಟಿನಲ್ಲಿ ಇಲಾಖೆ ಇನ್ನೂ ಉತ್ತಮ ರೀತಿ ಯಲ್ಲಿ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದರು.

ಸಿಐಸಿಇಎಫ್‌ನ ಉಪನಿರ್ದೇಶಕ ಎನ್. ಕೆ. ಪಾತ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರವು ಪ್ರತಿ ವರ್ಷ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಕಾಶ ದಿನವನ್ನಾಗಿ ಆಚರಿಸುತ್ತಿದೆ. ಭಾರತವು ಚಂದ್ರಯಾನವನ್ನು ನಡೆಸಿದ ನಾಲ್ಕನೇ ದೇಶ ವಾಗಿದ್ದು, ಭಾರತ ದೇಶ ಬಾಹ್ಯಾಕಾಶದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದೆ. ಇದರಿಂದಾಗಿ ಸಮಾಜಕ್ಕೆ ಹಲವು ಪ್ರಯೋಜನಗಳು ಸಹ ಆಗಿವೆ ಎಂದರು.

ಇದೇ ಸಂದರ್ಭ ಇಸ್ರೋದ ವಿಜ್ಞಾನಿ ನಕುಲ್ ಪಾಥಕ್ ಮೀನುಗಾರ ರೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಿ ದರು. ಕಾರ್ಯಕ್ರಮ ದಲ್ಲಿ ಶ್ರೀಕಾಂತ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜ ನಿಕರು ಹಾಗೂ ಇತರರು ಉಪಸ್ಥಿತರಿದ್ದರು.

ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಯು.ಮಹೇಶ್ ಕುಮಾರ್ ಸ್ವಾಗತಿಸಿ, ಮಲ್ಪೆ ಮೀನುಗಾರಿಕಾ ಬಂದರಿನ ಉಪನಿರ್ದೇಶಕಿ ಸರಿತಾ ಖಾದ್ರಿ ಕಾರ್ಯಕ್ರಮ ನಿರೂಪಿಸಿದರು. ಸಿ.ಐ.ಸಿ.ಇ.ಎಫ್ ನ ಸಹಾಯಕ ನಿರ್ದೇಶಕಿ ದಿವ್ಯ ಶರ್ಮ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News