ಮಣಿಪಾಲ: ಎಂಐಟಿ ವಿದ್ಯಾರ್ಥಿ ಆತ್ಮಹತ್ಯೆ

Update: 2023-10-16 09:34 GMT

ಮಣಿಪಾಲ, ಅ.16: ಮಣಿಪಾಲ ಎಂಐಟಿ ವಿದ್ಯಾರ್ಥಿಯೋರ್ವ ಹಾಸ್ಟೆಲ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿರುವುದು ವರದಿಯಾಗಿದೆ.

ಮೃತರನ್ನು ಉತ್ತರ ಪ್ರದೇಶ ಮೂಲದ ಅಮಿತ್ ಕುಮಾರ್ ಎಂಬವರ ಮಗ ಅಸ್ತಿತ್ವ ರಾಥೋರ್(19) ಎಂದು ಗುರುತಿಸಲಾಗಿದೆ.

ಇವರ ತಂದೆ ಅ.13ರಂದು ಫೋನ್ ಕರೆ ಮಾಡಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವಂತೆ ಬುದ್ಧಿವಾದ ಹೇಳಿದ್ದರೆನ್ನಲಾಗಿದೆ. ಇದೇ ವಿಚಾರವಾಗಿ ಮನನೊಂದಿದ್ದ ಅಸ್ತಿತ್ವ ಅ.14ರಂದು ಸಂಜೆ ಮಣಿಪಾಲ ಎಂಐಟಿ ಹಾಸ್ಟೆಲ್‌ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News